Shikaripura: Protest demanding the development of huccharaya swamy temple ಶಿಕಾರಿಪುರ : ಹುಚ್ಚರಾಯ ಸ್ವಾಮಿ ದೇವಾಲಯ ಅಭಿವೃದ್ದಿಗೆ ಆಗ್ರಹಿಸಿ ಪ್ರತಿಭಟನೆ

shikaripur | ಶಿಕಾರಿಪುರ : ಹುಚ್ಚರಾಯ ಸ್ವಾಮಿ ದೇವಾಲಯ ಅಭಿವೃದ್ದಿಗೆ ಆಗ್ರಹಿಸಿ ಪ್ರತಿಭಟನೆ

ಶಿಕಾರಿಪುರ (shikaripur), ಅ. 8: ಶಿಕಾರಿಪುರ ಪಟ್ಟಣದ ಕ್ಷೇತ್ರ ದೇವತೆ ಹುಚ್ಚರಾಯ ಸ್ವಾಮಿ ದೇವಾಲಯದ (huccharaya swamy temple) ಸರ್ವಾಂಗೀಣ ಅಭಿವೃದ್ದಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ಜನಜಾಗೃತ ವೇದಿಕೆ ಸಂಘಟನೆಯು ಸೆ. 8 ರ ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಅರ್ಪಿಸಿತು.

ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ಈಗಾಗಲೇ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ನಿರ್ಲಕ್ಷ್ಯವಹಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ದೇವಾಲಯದ ಗೋಪುರ ಬಿರುಕು ಬಿಟ್ಟಿದ್ದು, ದುರಸ್ತಿಗೆ ಕ್ರಮಕೈಗೊಳ್ಳಬೇಕು. ದೇವಾಲಯ ಬಳಿ ಭಕ್ತಾಧಿಗಳ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ವಸ್ತ್ರಸಂಹಿತೆ ಜಾರಿಗೊಳಿಸಬೇಕು. ರಥ ಬೀದಿ ರಸ್ತೆಯಲ್ಲಿ ಭಾರೀ ಸರಕು – ಸಾಗಾಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಂಘಟನೆಯ ರಾಜ್ಯಾಧ್ಯಕ್ಷ ಎಸ್. ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ಅಹವಾಲು ಆಲಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ  ಎಂದು ಪ್ರತಿಭನಾಕಾರರು ತಿಳಿಸಿದ್ದಾರೆ.

Demanding that action should be taken for the all-round development of the Kshetra deity huccharaya swamy temple in Shikaripura town, the Karnataka Janajagrita vedike Sangathan protest was held in front of the Tahsildar office of the town on Tuesday and a petition was submitted.

bhadravati | Bhadravathi robbery case : Three people from Shimoga were sentenced to jail! ಭದ್ರಾವತಿ ದರೋಡೆ ಪ್ರಕರಣ : ಶಿವಮೊಗ್ಗದ ಮೂವರಿಗೆ ಜೈಲು ಶಿಕ್ಷೆ! Previous post bhadravati | ಭದ್ರಾವತಿ ದರೋಡೆ ಪ್ರಕರಣ : ಶಿವಮೊಗ್ಗದ ಮೂವರಿಗೆ ಜೈಲು ಶಿಕ್ಷೆ!
shimoga | ಶಿವಮೊಗ್ಗ : ಜಂಬೂ ಸವಾರಿಗೆ ಅದ್ಧೂರಿ ತಯಾರಿ! Next post shimoga | ಶಿವಮೊಗ್ಗ : ಜಂಬೂ ಸವಾರಿಗೆ ಅದ್ಧೂರಿ ತಯಾರಿ!