Permission for prosecution against Siddaramaiah: Congress workers attempt to lay siege to Yeddyurappa's residence in Shikaripura! ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ : ಶಿಕಾರಿಪುರದಲ್ಲಿ ಯಡಿಯೂರಪ್ಪ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಯತ್ನ!

ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ : ಶಿಕಾರಿಪುರದಲ್ಲಿ ಯಡಿಯೂರಪ್ಪ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಯತ್ನ!

ಶಿಕಾರಿಪುರ (shikaripura), ಆ. 18: ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ (prosecution against cm siddaramaiah) ಅನುಮತಿ ನೀಡಿರುವ ಕ್ರಮದ ವಿರುದ್ದ, ಶಿಕಾರಿಪುರ ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ (shikaripura congress) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾಳೇರಕೇರಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (former cm b s yediyurappa) ನಿವಾಸಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು.

ಕಾರ್ಯಕರ್ತರು ಮುತ್ತಿಗೆ ಹಾಕುವ ಮಾಹಿತಿ ತಿಳಿದಿದ್ದ ಪೊಲೀಸರು, ಮುನ್ನೆಚ್ಚರಿಕೆಯಾಗಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ (b s yediyurappa house) ತೆರಳುವ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಗಳನ್ನು ಹಾಕಿ ಬಂದ್ ಮಾಡಿದ್ದರು.

ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಆಗಮಿಸಿದ ಕಾಂಗ್ರೆಸ್ (congress) ಮುಖಂಡರು ಹಾಗೂ ಕಾರ್ಯಕರ್ತರನ್ನು, ಬ್ಯಾರಿಕೇಡ್ ಬಳಿಯೇ ಪೊಲೀಸರು ಅಡ್ಡಗಟ್ಟಿದರು. ನಂತರ ವಶಕ್ಕೆ ಪಡೆದು ಕರೆದೊಯ್ದರು.

ರಾಜ್ಯಪಾಲರು (governor) ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸಿಎಂ (cm) ಸಿದ್ದರಾಮಯ್ಯರ (siddaramaiah) ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ (bj, jds) ನಾಯಕರು ಷಡ್ಯಂತ್ರ ನಡೆಸುತ್ತಿದ್ಧಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.

Graduate college student raped in Bangalore! ಬೆಂಗಳೂರಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ! Previous post ಬೆಂಗಳೂರಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
Bagan offering by Minister to Bhadra Reservoir ಭದ್ರಾ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ Next post ಭದ್ರಾ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ