bhadravati | Bhadravathi robbery case : Three people from Shimoga were sentenced to jail! ಭದ್ರಾವತಿ ದರೋಡೆ ಪ್ರಕರಣ : ಶಿವಮೊಗ್ಗದ ಮೂವರಿಗೆ ಜೈಲು ಶಿಕ್ಷೆ!

bhadravati | ಭದ್ರಾವತಿ ದರೋಡೆ ಪ್ರಕರಣ : ಶಿವಮೊಗ್ಗದ ಮೂವರಿಗೆ ಜೈಲು ಶಿಕ್ಷೆ!

ಭದ್ರಾವತಿ (bhadravati), ಅ. 8: ಭದ್ರಾವತಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ನಗನಾಣ್ಯ ದೋಚಿದ್ದ ಶಿವಮೊಗ್ಗದ ಮೂವರಿಗೆ, ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲವು 5 ವರ್ಷ 1 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗದ ನಿವಾಸಿಗಳಾದ ಸೈಯದ್ ಇಬ್ರಾಹಿಂ (23), ಮೊಹಮ್ಮದ್ ಮುಸ್ತಫ (22) ಹಾಗೂ ಮೊಹಮ್ಮದ್ ಅಲ್ಲಾಭಕ್ಷಿ (22) ಜೈಲು ಶಿಕ್ಷೆಗೊಳಗಾದ ಯುವಕರೆಂದು ಗುರುತಿಸಲಾಗಿದೆ.

7-10-2024 ರಂದು ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 28-4-2024 ರಂದು ಭದ್ರಾವತಿ ಅನ್ವರ್ ಕಾಲೋನಿ ನಿವಾಸಿಯಾದ ಮೊಹಮ್ಮದ್ ಖಾಲೀದ್ (21) ಎಂಬುವರು, ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದರು.

ಈ ವೇಳೆ ಪ್ರಸ್ತುತ ಶಿಕ್ಷೆಗೊಳಗಾದ ಮೂವರು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ನಡೆಸಿದ್ದರು. ಹಣ, ಮೊಬೈಲ್ ಫೋನ್, ವಾಚ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ನ್ಯೂ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅಂದಿನ ತನಿಖಾಧಿಕಾರಿಯಾಗಿದ್ದ ಸರ್ಕಲ್ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.

The 4th Additional District and Sessions Court of Bhadravati sentenced three people from Shimoga to 5 years and 1 month simple imprisonment for assaulting a person and robbing them of cash in Bhadravati.

thirthahalli : The fire brigade saved the woman who fell into the well! ತೀರ್ಥಹಳ್ಳಿ : ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ! Previous post thirthahalli | ತೀರ್ಥಹಳ್ಳಿ : ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!
Shikaripura: Protest demanding the development of huccharaya swamy temple ಶಿಕಾರಿಪುರ : ಹುಚ್ಚರಾಯ ಸ್ವಾಮಿ ದೇವಾಲಯ ಅಭಿವೃದ್ದಿಗೆ ಆಗ್ರಹಿಸಿ ಪ್ರತಿಭಟನೆ Next post shikaripur | ಶಿಕಾರಿಪುರ : ಹುಚ್ಚರಾಯ ಸ್ವಾಮಿ ದೇವಾಲಯ ಅಭಿವೃದ್ದಿಗೆ ಆಗ್ರಹಿಸಿ ಪ್ರತಿಭಟನೆ