Shikaripura bandh in support of Siddaramaiah! ಸಿದ್ದರಾಮಯ್ಯ ಬೆಂಬಲಿಸಿ ಶಿಕಾರಿಪುರ ಬಂದ್

shikaripura | ಸಿದ್ದರಾಮಯ್ಯ ಬೆಂಬಲಿಸಿ ಶಿಕಾರಿಪುರ ಬಂದ್!

ಶಿಕಾರಿಪುರ (shikaripura), ಸೆ. 26: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ – ಜೆಡಿಎಸ್ ನಾಯಕರ ನಿಲುವು ಖಂಡಿಸಿ, ಅಹಿಂದ ಯುವ ಘಟಕ ಸೆ. 26 ರ ಗುರುವಾರ ಶಿಕಾರಿಪುರ ಪಟ್ಟಣ ಬಂದ್ (shikaripura town bandh) ಕರೆ ನೀಡಿತ್ತು.

ಪಟ್ಟಣದ ಪ್ರಮುಖ ರಸ್ತೆ – ವೃತ್ತಗಳಲ್ಲಿರುವ ಅಂಗಡಿ-ಮುಂಗಟ್ಟುಗಳು, ಬಾಗಿಲು ಮುಚ್ಚಿದ್ದವು. ಜನ – ವಾಹನಗಳ ಸಂಚಾರ ಸಂಪೂರ್ಣ ವಿರಳವಾಗಿತ್ತು. ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತು.

ಶಿಕಾರಿಪುರ ಪಟ್ಟಣದ ಕನಕಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಆಕ್ರೋಶ : ಸಿಎಂ ಸಿದ್ದರಾಮಯ್ಯ (cm siddaramaiah) ಅವರು ಮುಖ್ಯಮಂತ್ರಿಯಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ, ಸರ್ವರ ಏಳ್ಗೆಗೆ ಶ್ರಮಿಸುತ್ತಿದ್ದಾರೆ.

ಆದರೆ ಬಿಜೆಪಿ ಹಾಗೂ ಜೆಡಿಎಸ್ (bjp – jds) ನಾಯಕರು, ಸಿದ್ದರಾಮಯ್ಯ ವಿರುದ್ದ ಕುತಂತ್ರ ನಡೆಸುತ್ತಿದ್ದಾರೆ. ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Supporting Chief Minister Siddaramaiah and condemning the stand of BJP leaders who are demanding his resignation, ahinda organisations on thursday called, shikaripura town bandh.

shimoga | Shimoga: Govt approves lake canal - request for quality work ಶಿವಮೊಗ್ಗ : ಸರ್ಕಾರದಿಂದ ಕೆರೆ ಕಾಲುವೆ ಮಂಜೂರು - ಗಮನಹರಿಸುವರೆ ಶಾಸಕರು Previous post shimoga | ಶಿವಮೊಗ್ಗ : ಸರ್ಕಾರದಿಂದ ಕೆರೆ ಕಾಲುವೆ ಮಂಜೂರು – ಗಮನಹರಿಸುವರೆ ಶಾಸಕರು?
Vande Bharat train movement between Bangalore – Shimoga: What did the minister say? ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ : ಸಚಿವರು ಹೇಳಿದ್ದೇನು? Next post shimoga railway | ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ : ಸಚಿವರು ಹೇಳಿದ್ದೇನು?