shimoga | ಶಿವಮೊಗ್ಗ : ಕಾರು ಚಾಲಕನ ಹುಚ್ಚಾಟ – ಅಪಾಯದಿಂದ ಪಾರಾದ ಟ್ರಾಫಿಕ್ ಪೊಲೀಸ್ ಪೇದೆ!
ಶಿವಮೊಗ್ಗ (shivamogga), ಅ. 24: ವಾಹನಗಳ ತಪಾಸಣೆ ನಡೆಸುವ ವೇಳೆ, ಕಾರು ಚಾಲಕನೋರ್ವ ವಾಹನ ನಿಲ್ಲಿಸದೆ ಟ್ರಾಫಿಕ್ ಪೊಲೀಸ್ ಪೇದೆ ಮೇಲೆ ಕಾರು ಹರಿಸಿದ್ದು, ಈ ವೇಳೆ ಪೇದೆಯು ಕಾರಿನ ಬಾನೆಟ್ ಮೇಲೆ ಹಾರಿ ಜೀವ ಉಳಿಸಿಕೊಂಡ ಸಿನಿಮೀಯ ಶೈಲಿಯ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಸಹ್ಯಾದ್ರಿ ಕಾಲೇಜ್ ಬಳಿ ಅ. 24 ರ ಮಧ್ಯಾಹ್ನ ಈ ಘಟನೆ ನಡೆದಿದೆ. ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆ ಪೇದೆ ಪ್ರಭು ಎಂಬುವರೇ, ಕಾರು ಚಾಲಕನ ಹುಚ್ಚಾಟದಿಂದ ಅಪಾಯಕ್ಕೆ ಸಿಲುಕಿ ಬಿದ್ದ ಪೇದೆ ಎಂದು ಗುರುತಿಸಲಾಗಿದೆ.
ಏನಾಯ್ತು? : ಸಹ್ಯಾದ್ರಿ ಕಾಲೇಜ್ ನ ಬೈಪಾಸ್ ರಸ್ತೆ ಬಳಿ ಪೂರ್ವ ಟ್ರಾಫಿಕ್ ಠಾಣೆ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಕಡೆಯಿಂದ ಆಗಮಿಸಿದ ಕಾರೊಂದನ್ನು, ಪೇದೆಯು ಅಡ್ಡ ಹಾಕಿದ್ದಾರೆ. ಈ ವೇಳೆ ಚಾಲಕ ಕಾರು ನಿಲ್ಲಿಸಲು ಮೀನಮೇಷ ಎಣಿಸಿದ್ದಾನೆ.
ಕಾರನ್ನು ಮುಂದಕ್ಕೆ ಚಲಾಯಿಸಲಾರಂಭಿಸಿದ್ದಾನೆ. ಕಾರು ಆಫ್ ಮಾಡುವಂತೆ ಪೇದೆ ನಿರಂತರ ಸೂಚನೆ ಹೊರತಾಗಿಯೂ ನಿಲ್ಲಿಸದೆ, ಏಕಾಏಕಿ ಕಾರಿಗೆ ಅಡ್ಡ ನಿಂತ ಪೇದೆ ಮೇಲೆಯೇ ಚಾಲಕ ಕಾರು ನುಗ್ಗಿಸಿದ್ದಾನೆ. ಈ ವೇಳೆ ಪೇದೆಯು ಕಾರಿನ ಬಾನೆಟ್ ಮೇಲೆ ಹಾರಿದ್ದಾರೆ.
ಇದೇ ಸ್ಥಿತಿಯಲ್ಲಿ ಸರಿಸುಮಾರು 100 ಮೀಟರ್ ದೂರದವರೆಗೆ ಚಾಲಕ ಕಾರನ್ನು ಓಡಿಸಿದ್ದಾನೆ. ಸಾರ್ವಜನಿಕರೋರ್ವರು ಸದರಿ ಘಟನೆಯನ್ನು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದರು. ಸದರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎಫ್ಐಆರ್ : ‘ಭದ್ರಾವತಿ ಹೊಸಮನೆ ನಿವಾಸಿಯಾದ ಕೇಬಲ್ ಆಪರೇಟರ್ ಓರ್ವರೇ ಆರೋಪಿತ ಕಾರು ಚಾಲಕನಾಗಿದ್ದಾನೆ. ಈ ಕುರಿತಂತೆ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್
ಅವರು ತಿಳಿಸಿದ್ದಾರೆ.
While inspecting the vehicles, a car driver rammed his car into a traffic police constable without stopping, and the constable jumped on the bonnet of the car and saved his life in a cinematic incident in Shimoga city.
