Separate accident cases in shimoga and sagara : four dead! ಶಿವಮೊಗ್ಗ – ಸಾಗರದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ : ಬೈಕ್ ನಲ್ಲಿದ್ದ ನಾಲ್ವರು ಸಾವು!

accident news | ಶಿವಮೊಗ್ಗ – ಸಾಗರದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ : ಬೈಕ್ ನಲ್ಲಿದ್ದ ನಾಲ್ವರು ಸಾವು!

ಶಿವಮೊಗ್ಗ / ಸಾಗರ, ಅ. 25: ಶಿವಮೊಗ್ಗ ಹಾಗೂ ಸಾಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ, ಬೈಕ್ ನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

ಶಿವಮೊಗ್ಗ ವರದಿ : ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಲವಗೊಪ್ಪ ಸಮೀಪದ ಶಿವಮೊಗ್ಗ – ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ, ತಡರಾತ್ರಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ನಲ್ಲಿದ್ದ ಇಬ್ಬರು ಮೃತಪಟ್ಟು, ಮತ್ತೋರ್ವರು ಗಾಯಗೊಂಡಿದ್ದಾರೆ.

ಶಿವಮೊಗ್ಗದ ವಿದ್ಯಾನಗರದ ನಿವಾಸಿಗಳಾದ ಚೈತನ್ಯ (23) ಹಾಗೂ ರೋಹಿತ್ (18) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಮತ್ತೋರ್ವ ತೇಜಸ್ (17) ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಭದ್ರಾವತಿಯೆಡೆಗೆ ತೆರಳುತ್ತಿದ್ದ ಲಾರಿ ಹಾಗೂ ಎದುರಿನಿಂದ ಆಗಮಿಸಿದ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಸಾಗರ ವರದಿ : ಸಾಗರ ತಾಲೂಕಿನ ಆನಂದಪುರ ಸಮೀಪದ ಗೌತಮಪುರದ ಬಳಿ ಅ. 25 ರಂದು ಟಿವಿಎಸ್ ಎಕ್ಸ್’ಎಲ್ ಹಾಗೂ ಸರಕು ಸಾಗಾಣೆ ವಾಹನದ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ, ಬೈಕ್ ನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಬೆಳಂದೂರು ಗ್ರಾಮದ ವಾಸಪ್ಪ (65) ಹಾಗೂ ಅವರ ಅಳಿಯ ಸತೀಶ್ (35) ಮೃತಪಟ್ಟವರೆಂದು ಗುರುತಿಸಲಾಗಿದೆ. ಟಿವಿಎಸ್ ಎಕ್ಸ್’ಎಲ್ ದ್ವಿಚಕ್ರ ವಾಹನವು, ಬೆಳಂದೂರು ಗ್ರಾಮದಿಂದ ಆನಂದಪುರದ ಕಡೆಗೆ ಹಾಗೂ ಸರಕು ಸಾಗಾಣೆ ಅಶೋಕ ಲೇಲ್ಯಾಂಡ್ ದೋಸ್ತ್ ವಾಹನವು ಆನಂದಪುರದಿಂದ ತ್ಯಾಗರ್ತಿ ಕಡೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

In two separate road accidents in shimoga and sagara, four people on bikes died.

Shimoga: Ganja sale case - three arrested! ಶಿವಮೊಗ್ಗ : ಗಾಂಜಾ ಮಾರಾಟ ಪ್ರಕರಣ – ಮೂವರ ಬಂಧನ! Previous post shimoga | ಶಿವಮೊಗ್ಗ : ಗಾಂಜಾ ಮಾರಾಟ ಪ್ರಕರಣ – ಮೂವರ ಬಂಧನ!
Shimoga : Inauguration of Police Community House by Home Minister ಶಿವಮೊಗ್ಗ : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ Next post shimoga | ಶಿವಮೊಗ್ಗ : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ