actor darshan | ಚಿತ್ರನಟ ದರ್ಶನ್ ಗೆ ಮಧ್ಯಂತರ ಜಾಮೀನು : ಕಾರಣವೇನು?
ಬೆಂಗಳೂರು (bengaluru), ಅ. 30: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಸೆಂಟ್ರಲ್ ಜೈಲ್ ನಲ್ಲಿ ವಿಚಾರಣಾಧೀನ ಖೈದಿಯಾಗಿರುವ, ಚಿತ್ರನಟ ದರ್ಶನ್ ಗೆ ಅ. 30 ರಂದು ಹೈಕೋರ್ಟ್ ಏಕ ಸದಸ್ಯ ಪೀಠ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ದರ್ಶನ್ ಅವರು ಇಚ್ಚೆ ವ್ಯಕ್ತಪಡಿಸುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ದರ್ಶನ್ ಅವರ ಪಾಸ್ ಪೋರ್ಟ್ ನ್ನು ಕೋರ್ಟ್ ವಶಕ್ಕೆ ಒಪ್ಪಿಸಬೇಕು. ಒಂದು ವಾರದಲ್ಲಿ ದರ್ಶನ್ ಚಿಕಿತ್ಸೆಯ ವಿವರವನ್ನು ಕೋರ್ಟ್ ಗೆ ಒಪ್ಪಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ದರ್ಶನ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಬೆಳಿಗ್ಗೆ 10. 30 ರ ಸುಮಾರಿಗೆ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ದೀಪಾವಳಿ ಹಬ್ಬದ ವೇಳೆಯೇ ದರ್ಶನ್ ಗೆ ಮಧ್ಯಂತರ ಜಾಮೀನು ದೊರಕಿದೆ. 131 ದಿನಗಳ ನಂತರ ದರ್ಶನ್ ಅವರು ಜೈಲಿನಿಂದ ಹೊರಬರುತ್ತಿದ್ದಾರೆ.
ಅನಾರೋಗ್ಯ : ದರ್ಶನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು, ‘ದರ್ಶನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ದೇಹದಲ್ಲಿ ರಕ್ತ ಪರಿಚಲನೆ ಸಮರ್ಪಕವಾಗಿ ಆಗುತ್ತಿಲ್ಲ. ಪಾದಗಳಲ್ಲಿ ಮರಗಟ್ಟುವಿಕೆ ಸಮಸ್ಯೆಯಿದೆ. ಡಿಸ್ಕ್ ಹಾಗೂ ನರದ ಸಮಸ್ಯೆಯೂ ಕೂಡ ಇದೆ. ಅವರು ತುರ್ತು ಚಿಕಿತ್ಸೆಗೆ ಒಳಗಾಗಬೇಕಾದ ಅಗತ್ಯವಿದೆ. ಈ ಕಾರಣದಿಂದ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ವಾದ – ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು, ವೈದ್ಯಕೀಯ ನೆಲೆಯ ಮೇಲೆ ದರ್ಶನ್ ಅವರಿಗೆ 6 ವಾರಗಳ ಕಾಲ ಜಾಮೀನು ಮಂಜೂರು ಮಾಡಿದ್ದಾರೆ. 6 ವಾರಗಳ ನಂತರ ದರ್ಶನ್ ಅವರು ಮರಳಿ ಜೈಲಿಗೆ ತೆರಳಬೇಕಾಗುತ್ತದೆ.
ಬಂಧನ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ದರ್ಶನ್, ಪವಿತ್ರಗೌಡ ಸೇರಿದಂತೆ 17 ಜನರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ದರ್ಶನ್ ಮತ್ತವರ ಸಹಚರರನ್ನು, ಕಳೆದ ತಿಂಗಳು ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿತ್ತು.
Bengaluru : On October 30, a single member bench of the High Court granted 6 weeks interim bail to actor Darshan, who was arrested in the Chitradurga Renukaswamy murder case and is an under-trial prisoner in Bellary Central Jail.
Arrest: 17 people including Darshan and Pavitra Gowda were arrested by Bengaluru police in connection with the Renukaswamy murder case. Darshan and his accomplices, who were in Bangalore Central Jail, were shifted to different Central Jails in the state last month.
