
ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆಯಿಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅ. 31- ‘ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ’ ಎಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿ ನೋಟೀಸುಗಳಿಗೆ ಸಂಬಂಧಿಸಿದಂತೆ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆ ಮಾಡುವುದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು 200ಕ್ಕೂ ಹೆಚ್ಚು ನೋಟೀಸ್ ಗಳನ್ನು ನೀಡಿದ್ದಾರೆ. ಅವರದು ಇಬ್ಬದಿ ರಾಜಕೀಯ ನಡೆ. ಯಾವ ರೈತರನ್ನೂ ಒಕ್ಕಲೆಬ್ಬಿಸಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಕೊಟ್ಟಿರುವ ನೋಟೀಸ್ ಗಳನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ನವೆಂಬರ್ 4ರ ಅವರ ಪ್ರತಿಭಟನೆ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತವಾದದ್ದು, ಸಮಸ್ಯೆಗಳು ಇರದೆಡೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಈಗ ಮುಡಾ ಪ್ರಕರಣದಲ್ಲಿ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದಿದ್ದು, ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ.
ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರೂ ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೇ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.
More Stories
bengaluru | ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದೇನು?
Good news for state government employees : What did state president CS Shadakshari say?
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದೇನು?
bengaluru | ಬೆಂಗಳೂರು | ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ : ಸೌಜನ್ಯ ತಾಯಿ ನಿರ್ಧರಿಸಬೇಕು – ಸಿಎಂ ಹೇಳಿಕೆ
Appeal to Supreme Court: Saujanya’s mother should decide – CM’s statement
ಬೆಂಗಳೂರು | ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ : ಸೌಜನ್ಯ ತಾಯಿ ನಿರ್ಧರಿಸಬೇಕು – ಸಿಎಂ ಹೇಳಿಕೆ
bengaluru news | ಬೆಂಗಳೂರು | ಆಗಸ್ಟ್ 31 ರಿಂದ ನೋಂದಣಿ – ಮುದ್ರಾಂಕ ಶುಲ್ಕ ಏರಿಕೆ : ಆಯುಕ್ತ ಮುಲ್ಲೈ ಮುಗಿಲನ್ ಹೇಳಿದ್ದೇನು?
Registration – Stamp duty hike from August 31st: What did Commissioner Mullai Mugilan say?
ಬೆಂಗಳೂರು | ಆಗಸ್ಟ್ 31 ರಿಂದ ನೋಂದಣಿ – ಮುದ್ರಾಂಕ ಶುಲ್ಕ ಏರಿಕೆ : ಆಯುಕ್ತ ಮುಲ್ಲೈ ಮುಗಿಲನ್ ಹೇಳಿದ್ದೇನು?
bengaluru | ‘ಪೊಲೀಸರಿಗೆ ಸಾಮಾಜಿಕ ಬದ್ಧತೆಯಿರಬೇಕು’ : ಸಿಎಂ ಸಿದ್ದರಾಮಯ್ಯ
Peace can be established in society through social commitment of the police: CM Siddaramaiah
‘ಪೊಲೀಸರಿಗೆ ಸಾಮಾಜಿಕ ಬದ್ಧತೆಯಿರಬೇಕು’ : ಸಿಎಂ ಸಿದ್ದರಾಮಯ್ಯ
bengaluru | ಬೆಂಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ : ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ ಸೂಚನೆ – ಪರಿಹಾರ ಘೋಷಣೆ
Bengaluru cylinder explosion: Instructions to repair damaged houses – Compensation announced
ಬೆಂಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ : ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ ಸೂಚನೆ – ಪರಿಹಾರ ಘೋಷಣೆ
prajwal revanna | ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ?
Prajwal Revanna found guilty – when will the sentence be announced?
ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ?