ಶಿಕಾರಿಪುರ : shikaripura - Those who went to the temple ended up in the cemetery: A young man and a young woman who were engaged to be married met a tragic end! ದೇವಾಲಯಕ್ಕೆ ಹೊರಟವರು ಸ್ಮಶಾನಕ್ಕೆ : ವಿವಾಹ ನಿಶ್ಚಯವಾಗಿದ್ದ ಯುವಕ – ಯುವತಿಯ ದಾರುಣ ಅಂತ್ಯ!

shimoga | ಆನವಟ್ಟಿ, ಶಿಕಾರಿಪುರದಲ್ಲಿ ಪ್ರತ್ಯೇಕ ಅಪಘಾತ : ಮೂವರು ಸಾವು – 12 ಜನರಿಗೆ ಗಾಯ!

ಶಿವಮೊಗ್ಗ, ಜ. 15: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹಾಗೂ ಶಿಕಾರಿಪುರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಮೃತಪಟ್ಟು, 12 ಜನ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಆನವಟ್ಟಿ : ನೆಗವಾಡಿ ಗ್ರಾಮ ಸಮೀಪದ ಹಿರೇಮಾಗಡಿ ಕ್ರಾಸ್ ರಾಜ್ಯ ಹೆದ್ಧಾರಿಯಲ್ಲಿ, ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್ ರಸ್ತೆ ಬದಿ ಸಿಮೆಂಟ್ ಕಂಬಗಳಿಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಬಿದ್ದ ಘಟನೆ ರಾತ್ರಿ ನಡೆದಿದೆ.

ಚಿಕ್ಕಕಣ್ಣೂರು ಗ್ರಾಮದ ಹನುಮಂತಪ್ಪ (50), ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಹಾಗೂ ಕಣಸೋಗಿ ಗ್ರಾಮದ ರೇಣುಕಮ್ಮ (65) ಮೃತಪಟ್ಟವರೆಂದು ಗುರುತಿಸಲಾಗಿದೆ.

ಘಟನೆಯಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಅವರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದರಿ ಜೀಪ್ ಕಣಸೋಗಿಯಿಂದ ಎಸ್ ಎನ್ ಕೊಪ್ಪ ಕಡೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕಾರಿಪುರ : ತಾಲೂಕಿನ ಜಕ್ಕನಹಳ್ಳಿ ಸಮೀಪ ಸೋಮವಾರ ಮುಂಜಾನೆ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ, 8 ಜನ ಗಾಯಗೊಂಡ ಘಟನೆ ವರದಿಯಾಗಿದೆ.

ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನಾಳ್ಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದವರು ಗಾಯಗೊಂಡಿದ್ದಾರೆ. ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದಾರೆ. ಹೊನ್ನಾಳ್ಳಿಯಿಂದ ಚಂದ್ರಗುತ್ತಿಗೆ ತೆರಳುತ್ತಿದ್ದ ವೇಳೆ, ಬಸ್ ಡಿಕ್ಕಿ ಹೊಡೆದಿದೆ.

ಇದರಲ್ಲಿ ಐವರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga, January 15: Three people were killed and 12 injured in two separate road accidents at Anavatti and Shikaripura in Soraba taluk of the district on Monday.

Anavatti: At Hiremagadi cross near Negavadi village, the driver lost control of the jeep, hit the cement pillars on the roadside and overturned at night. Three died and four were injured in the accident.

Shikaripura: A collision between a bus and a tractor took place in the early hours of Monday near Jakkanahalli in the taluk, and 8 people were injured.

bengaluru | Bengaluru - Journalists' Co-operative Society calendar released bengaluru | ಬೆಂಗಳೂರು - ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ Previous post bengaluru | ಬೆಂಗಳೂರು – ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ
Shimoga - Attack on a trader by miscreants: The video went viral! ಶಿವಮೊಗ್ಗ – ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳಿಂದ ವ್ಯಾಪಾರಿ ಮೇಲೆ ಹಲ್ಲೆ : ವೈರಲ್ ಆದ ವೀಡಿಯೋ! Next post ಶಿವಮೊಗ್ಗ – ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳಿಂದ ವ್ಯಾಪಾರಿ ಮೇಲೆ ಹಲ್ಲೆ : ವೈರಲ್ ಆದ ವೀಡಿಯೋ!