
shimoga | ಶಿವಮೊಗ್ಗ : ಜ.18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗ (shivamogga), ಜ.16: ಶಿವಮೊಗ್ಗ ತಾಲೂಕಿನ ಸಂತೇಕಡೂರು ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ, ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜ.18 ರ ಬೆಳಿಗ್ಗೆ10 ಗಂಟೆಯಿಂದ ಸಂಜೆ 6 ಗಂಟೆವರೆಗೆ, ಶಿವಮೊಗ್ಗ ತಾಲೂಕು ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಜ. 16 ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿವರ : ಎಫ್-1 ಉಂಬ್ಳೇಬೈಲು, ಎಫ್-2 ಲಕ್ಕಿನಕೊಪ್ಪ, ಎಫ್-3 ಮತ್ತೂರು ಕುಡಿಯುವ ನೀರಿನ, ಎಫ್-4 ಸಂತೇಕಡೂರು, ಎಫ್-8 ಗಣಿದಾಳು ಮತ್ತು ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ
ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕ ನಗರ, ಲಕ್ಕಿನಕೊಪ್ಪ,
ತೋಟದಕೆರೆ, ಹುರಳಿಹಳ್ಳಿ, ಗಣಿದಾಳು ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಿಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Shimoga, January 16: Mescom said that the conductor change work has been started at the 66/11 KV power distribution center in Santhekadur village of Shimoga taluk.
In this context, Mescom said in a press release on January 16 that there will be power outage in various parts of Shimoga Taluk Rural Sub-Division from 10 am to 6 pm on January 18.
Santhekadur, Sri Ramanagara, Rampura, Koralahalli, Kachinakatte, Jyotinagar, Dodbibilu, Vinayaka Nagar, Lakkinakoppa, Thotadakere, Huralihalli, Ganidalu Umblebailu, Kanagalasara, Marathi Camp, Saligere, Kaithottilu and surrounding areas will experience power outage.
#mescom, #powercut, #shimogapowercutnews, #poweroutage, #powersupply, #powercutnews, #ವಿದ್ಯುತ್ ವ್ಯತ್ಯಯ, #ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, #ವಿದ್ಯುತ್ ಸರಬರಾಜು ಸ್ಥಗಿತ, #ವಿದ್ಯುತ್, #ಮೆಸ್ಕಾಂ,
.