Shimoga Palike | Municipality area revision: Speed in Tumkur - snail pace in Shivamogga! | Continued negligence of public representatives - officials..!! ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ - ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು - ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!!

shimoga BREAKING NEWS | ಶಿವಮೊಗ್ಗ ಪಾಲಿಕೆ ಅಧಿಕಾರಿ ಲೋಕಾಯುಕ್ತ ಬಲೆಗೆ!

ಶಿವಮೊಗ್ಗ (shivamogga), ಜ. 16: ಗುತ್ತಿಗೆದಾರರೋರ್ವರಿಂದ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ  ಅಧಿಕಾರಿ ಓರ್ವರನ್ನು, ಲೋಕಾಯುಕ್ತ ಪೊಲೀಸ್ ತಂಡ ವಶಕ್ಕೆ ಪಡೆದ ಘಟನೆ ಜ. 16 ರಂದು ನಡೆದಿದೆ.

ಪಾಲಿಕೆ ಎಂಜಿನಿಯರಿಂಗ್ – ಅಕೌಂಟ್ ವಿಭಾಗದ ಅಧಿಕಾರಿ ಸಿದ್ದೇಶ್ ಲೋಕಾಯುಕ್ತ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ.

ಭದ್ರಾವತಿ ಮೂಲದ ಗುತ್ತಿಗೆದಾರರೋರ್ವರಿಂದ ಕಚೇರಿಯಲ್ಲಿಯೇ 10 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ತಂಡ ದಾಳಿ ನಡೆಸಿ, ಲಂಚದ ಹಣದ ಸಮೇತ ಎಂಜಿನಿಯರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ, ಇನ್ಸ್’ಪೆಕ್ಟರ್ ಗಳಾದ ಸುರೇಶ್, ಪ್ರಕಾಶ್ ಸೇರಿದಂತೆ ಮತ್ತವರ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ದಾಳಿಯ ಕುರಿತಂತೆ ಅಧಿಕೃತ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಸಂಜೆ ಕೂಡ ಪಾಲಿಕೆ ಕಚೇರಿಯಲ್ಲಿಯೇ ಲೋಕಾಯುಕ್ತ ತಂಡ ಬೀಡುಬಿಟ್ಟು ಮಾಹಿತಿ ಕಲೆ ಹಾಕುತ್ತಿದೆ.

ಲೋಕಾಯುಕ್ತ ದಾಳಿ ವಿಚಾರವು, ಪಾಲಿಕೆ ಆಡಳಿತದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಕೆಲ ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳಲ್ಲಿ ನಡುಕ ಸೃಷ್ಟಿಸಿತ್ತು.

An incident took place on January 16 when a Lokayukta police team arrested an officer of Shimoga Municipal Corporation who was taking bribe from a contractor.

It is said that Lokayukta SP Manjunath Chaudhary, inspectors Suresh, Prakash and other staff were involved in the raid.

shimoga | Shimoga: The police department destroyed a large amount of cannabis! shimoga | ಶಿವಮೊಗ್ಗ : ಭಾರೀ ಪ್ರಮಾಣದ ಗಾಂಜಾ ನಾಶಗೊಳಿಸಿದ ಪೊಲೀಸ್ ಇಲಾಖೆ! Previous post shimoga | ಶಿವಮೊಗ್ಗ : ಭಾರೀ ಪ್ರಮಾಣದ ಗಾಂಜಾ ನಾಶಗೊಳಿಸಿದ ಪೊಲೀಸ್ ಇಲಾಖೆ!
shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ? Next post shimoga | ಶಿವಮೊಗ್ಗ : ಜ.18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ