shimoga | ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಸಾವು!
ಶಿವಮೊಗ್ಗ (shivamogga), ಜ. 20: ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಜ. 19 ರಂದು, ಅಪರಿಚಿತ ಮಹಿಳೆಯೋರ್ವರ ಶವ ಪತ್ತೆಯಾದ ಘಟನೆ ನಡೆದಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಸುಸ್ತಾಗಿ ಬಿದ್ದಿದ್ದ ಅಪರಿಚಿತ ಮಹಿಳೆಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಅಪರಿಚಿತ ಮಹಿಳೆಯು ಸುಮಾರು 50 ರಿಂದ 55 ವರ್ಷದವರಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟನ್ನು ಹೊಂದಿದ್ದಾರೆ.
ಸುಮಾರು 8 ಇಂಚಿನ ಉದ್ದದ ಕಪ್ಪು ಬಿಳಿ ಬಣ್ಣದ ತಲೆ ಕೂದಲು. ಹಣೆಯ ಮೇಲ್ಬಾಗದ ಮಧ್ಯದಲ್ಲಿ ಜೋಳದ ಕಾಳು ಗಾತ್ರದ ಕಪ್ಪು ನರಗುಳ್ಳೆಯಿದೆ.
ಮೈಮೇಲೆ ಕೆಂಪು ಬಣ್ಣದ ರವಿಕೆ, ಹಸಿರು ಬಣ್ಣದ ಸೀರೆ ಹಾಗು ಗುಲಾಬಿ ಬಣ್ಣದ ಲಂಗ ಇದೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ: 08182261414/9916882544 ಗೆ ಸಂಪರ್ಕಿಸಬಹುದೆಂದು ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
Shivamogga 20: An incident took place near the KSRTC bus stand in Shimoga city, where the dead body of an unknown woman was found.
The police department has issued a press release in this regard. It has been informed in the publication that the unidentified woman who was lying down was admitted to the Government Megan Hospital and the doctor who examined her said that the woman was dead.
