
shimoga | ಶಿವಮೊಗ್ಗ : ಸಾರ್ವಜನಿಕರ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ..!
ಶಿವಮೊಗ್ಗ (shivamogga), ಜ. 24: ಗಣರಾಜ್ಯೋತ್ಸವ ನಿಮಿತ್ತ ಶಿವಮೊಗ್ಗ ನಗರದ ಅಲ್ಲಮಪ್ರಭು (ಫ್ರೀಡಂ ಪಾರ್ಕ್) ಮೈದಾನ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜ. 24 ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ ಹಾಗೂ ಫಲಪುಷ್ಪ ಮೇಳ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ!
ನೂರಾರು ನಾಗರೀಕರು ಮೇಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಮೇಳದ ಮುಂಭಾಗ ಐ ಲವ್ ಶಿವಮೊಗ್ಗ, ಚಂದ್ರಗುತ್ತಿ ದೇವಾಲಯ ಹಾಗೂ ಕವಿಶೈಲದ ಕಲಾಕೃತಿಗಳ ಮುಂಭಾಗ ನಾಗರೀಕರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರುವುದು ಕಂಡುಬರುತ್ತಿದೆ.
ಉತ್ಸವದಲ್ಲಿ ರೈತರು ಬೆಳೆದ ವಿವಿಧ ಫಲ-ಪುಷ್ಪಗಳು, ಕರಕುಶಲ ಮಳೆಗೆಗಳಾದ ಮಲೆನಾಡ ಕರಕುಶಲತೆಗಳು, ಸಹ್ಯಾದ್ರಿ ಕರಕುಶಲತೆ, ಬಂಜಾರ ಲಂಬಾಣಿ ಉಡುಪು, ಕಲ್ಲಿನ ಆಭರಣಗಳು, ಮಲೆನಾಡು ಸವಿರುಚಿ ತಿನಿಸು,
ಅಕ್ಕ ಕೆಫೆ, ಮ್ಯೂರಲ್ ಕಲಾ ಚಿತ್ರಗಳು, ಹಸೆ ಚಿತ್ತಾರೆ, ಮಣ್ಣಿನ ಅಲಂಕಾರಿಕ ಮಳಿಗೆ, ಸ್ವದೇಶಿ, ಕೌದಿ, ಈಚಲು ಚಾಪೆ, ಮರದ ಉತ್ಪನ್ನಗಳು, ಟೆರಾಕೋಟ, ಖಾದಿ ಉಡುಪುಗಳು ಸೇರಿದಂತೆ ಒಳಾಂಗಣದಲ್ಲಿ 30 ಕ್ಕೂ ಹೆಚ್ಚು ಮಳಿಗೆ
ಹಾಗೂ ಹೊರಾಂಗಣದಲ್ಲಿ ನರ್ಸರಿ ಗಿಡಗಳು, ವಿವಿಧ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳು, ತಿಂಡಿ-ತಿನಿಸು, ಸೀರೆ-ಬಟ್ಟೆ ಇನ್ನೂ ವಿವಿಧ ರೀತಿಯ 20 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇವು ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.
ಚಾಲನೆ : ಬೆಳಿಗ್ಗೆ ಮೇಳಕ್ಕೆ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಚಾಲನೆ ನೀಡಿದರು. ನಂತರ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವೈವಿಧ್ಯಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಇಲ್ಲಿ ಸೃಷ್ಟಿಯಾಗಿದೆ. ಕರಕುಶಲ ಕಲಾವಿದರಿಗೆ ಶಾಶ್ವತವಾಗಿ ಮಾರುಕಟ್ಟೆ ಒದಗಿಸಲು ಮಾಲ್‌ನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ. ಇದಕ್ಕೆ ನಮ್ಮ ಸಹಕಾರ ಸಹ ಇದೆ ಎಂದು ತಿಳಿಸಿದರು.
ಜಿ.ಪಂ. ಸಿಇಒ ಹೇಮಂತ್ ಅವರ ಮಲೆನಾಡ ಕರಕುಶಲ ಉತ್ಸವದ ಕನಸು ಇಂದು ನನಸಾಗಿದೆ. ಇಚ್ಚಾಶಕ್ತಿ ಇರುವ ಅಧಿಕಾರಗಳಿಂದ ಮಾತ್ರ ಇದು ಸಾಧ್ಯ .ಇಂತಹ ಕಾರ್ಯಕ್ರಮವನ್ನು ನೆನಪು ಮಾಡಿಕೊಂಡಾಗೆಲ್ಲಾ ಕರಕುಶಲ ಕಲಾವಿದರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಕೊರಗಿತ್ತು. ಆದರೆ ಇವತ್ತು ಅದಕ್ಕೆ ನ್ಯಾಯ ಸಿಕ್ಕಿದೆ ಎಂದೆನಿಸುತ್ತಿದೆ.
ಬೆಂಗಳೂರಿನಂತೆಯೇ ನಮ್ಮ ಜಿಲ್ಲೆಯಲ್ಲೂ ಬೃಹತ್ ಮಟ್ಟದಲ್ಲಿ ಕರಕುಶಲ ಮತ್ತು ಫಲ ಪುಷ್ಪ ಪ್ರದರ್ಶನ ಏರ್ಪಟ್ಟಿದೆ. ಕುಪ್ಪಳಿಯಲ್ಲಿನ ಕುವೆಂಪುರವರ ಮನೆಯನ್ನು ಇಡೀ ದೇಶದ ಜನ ನೋಡುವಂತಾಗಿ. ಅಂತಹ ಕುವೆಂಪುರವರ ಮನೆಯ ಕಲಾಕೃತಿಯನ್ನು ಕಲಾವಿದರು ಈ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಧಾರ್ಮಿಕ ಕೇಂದ್ರವಾದ ಚಂದ್ರಗುತ್ತಿ ದೇವಾಲಯ ಜನರನ್ನು ಸೆಳೆಯುತ್ತಿದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈ ಫಲಷುಪ್ಪ ಪ್ರದರ್ಶನದಲ್ಲಿ ಸುಮಾರು 428000 ಹೂಗಳನ್ನು ಬಳಕೆ ಮಾಡಲಾಗಿದೆ. ಹಾಗೂ ಇಂತಹ ಪ್ರದರ್ಶನದಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಉತ್ತಮ ಕರಕುಶಲ ವಸ್ತುಗಳು ಸಿದ್ದವಾಗುತ್ತಿವೆ.
ಆದರೆ ಅವುಗಳ ಮಾರಾಟ ಮಾತ್ರ ಕುಂಠಿತವಾಗಿದೆ. ಇಂತಹ ಮೇಳದಲ್ಲಿ ಆನ್‌ಲೈನ್ ಮೂಲಕ ಮಾರಾಟಕ್ಕೆ ಮುಂದಾಗಿದ್ದೇವೆ. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂದಿನ ಭಾರೀ ಮೇಳ ಆರಂಭಕ್ಕಿಂತ ಮಂಚಿತವಾಗಿ ಆನ್‌ಲೈನ್ ಮಾರಾಟದ ವ್ಯವಸ್ಥೆ ಕಲ್ಪಿಸಲು ಎಲ್ಲಾ ರೀತಿಯ ತಯಾರಿ ಮಾಡಲಾಗುತ್ತದೆ. ಈ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದ ಜಿ.ಪಂ ಸಿಇಒ ಎನ್. ಹೇಮಂತ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಸದೃಢವಾಗಿದ್ದು, ಉತ್ತಮವಾಗಿ ಕಾರ್ಯವೆಸುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳಿಗೆ ಶಾಶ್ವತವಾಗಿ ಮಳಿಗೆ ಸ್ಥಾಪನೆ ಮಾಡುವ ಯೋಚನೆ ಇದೆ.
ಒಳಾಂಗಣ ಮತ್ತು ಹೊರಾಂಗಣ ಅಲಂಕಾರಿಕ ವಸ್ತುಗಳು ಒಂದೇ ಸೂರಿನಡಿ ಹಾಪ್‌ಕಾಮ್ಸ್ ರೀತಿಯಲ್ಲಿ ಮಾರಾಟ ಮಾಡುವ ಪರಿಕಲ್ಪನೆ ಇದೆ. ಇಂದಿನ ಮೇಳಕ್ಕಾಗಿ ಜಿ.ಪಂ, ತಾ.ಪಂ ಹಾಗೂ ಎನ್‌ಆರ್‌ಎಲ್‌ಎಂ ತಂಡಗಳು ಶ್ರಮಿಸಿದ್ದಾರೆಂದು ಸ್ಮರಿಸಿದರು.
Shimoga, January 24: On the occasion of the Republic Day, the Malenad Handicrafts Festival and Phalapushpa Mela organized for three days from January 24 in collaboration with various departments including the Zilla Panchayat at Allama Prabhu (Freedom Park) grounds of Shimoga city is attracting public attention!’
Hundreds of citizens are arriving to watch the fair. In front of the fair I love Shivamogga, Chandragutti temple and poetic works of art, citizens are seen clicking photos and celebrating.
The festival showcases various fruits and flowers grown by farmers, handicrafts such as Malnad handicrafts, Sahyadri handicrafts, Banjara Lambani clothing, stone ornaments, Malenad delicacies,