
shimoga | ಶಿವಮೊಗ್ಗ : ಜ. 28 ರಂದು ಸಂಜೆ 6 ಗಂಟೆವರೆಗೆ ಯಾವೆಲ್ಲ ಪ್ರದೇಶಗಳಲ್ಲಿ ಸ್ಥಗಿತವಾಗಲಿದೆ ವಿದ್ಯುತ್ ಪೂರೈಕೆ?
ಶಿವಮೊಗ್ಗ (shivamogga), ಜ. 25: ಶಿವಮೊಗ್ಗ ತಾಲೂಕಿನ ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ, ಜನವರಿ 26 ರಂದು ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 28 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಗಾಜನೂರು ಕ್ಯಾಂಪ್, ತುಂಗಾ ಜಲಾಶಯ, ಸಕ್ರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ,
ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ, ಹೊಸಹಳ್ಳಿ,
ಮುಳ್ಕೆರೆ, ಆನೆಬಿಡಾರ, ತಿಮ್ಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
Mescom said that quarterly maintenance work was carried out on January 26 at Gajanur 110/11 KV power distribution station in Shimoga taluk. A press release has been issued in this regard. Mescom has informed that there will be disruption in power supply in the following areas on January 28 from 10 am to 6 pm due to maintenance work.
Gajanur Camp, Tunga Reservoir, Sakrebailu, Navodaya School, Shimoga Drinking Water Plant, Halalakkavalli, Kadekal, Yaraganal, Kuskur, Srikanthpur, Veerapur, Thattikere, Hosakoppa, Indiranagar, Hosahalli,
Mulkere, Anebidara, Timkapur and surrounding villages there will be power interruption. Mescom has informed the public to cooperate. #poweroutage, #powercut, #powercutnews, #shimogapowercut, #powersupplyvariable,