ಶಿವಮೊಗ್ಗ (shivamogga), ಫೆ. 21: ವೈನ್ ಶಾಪ್ ಎದುರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾದ ಘಟನೆ, ಶಿವಮೊಗ್ಗ ನಗರದ ಸಾಗರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾ ಸಮೀಪದ ಬ್ಲೂಮೂನ್ ವೈನ್ಸ್ ಬಳಿ ಫೆ. 21 ರ ಸಂಜೆ ನಡೆದಿದೆ.
ಹೊಸಮನೆ ಬಡಾವಣೆ ನಿವಾಸಿಗಳಾದ ಹರೀಶ್ (35) ಹಾಗೂ ಮಂಜುನಾಥ್ (28) ಹಲ್ಲೆಗೊಳಗಾದವರೆಂದು ಗುರುತಿಸಲಾಗಿದೆ. ಮಂಜುನಾಥ್ ನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಹರೀಶ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹರೀಶ್ ಹಾಗೂ ಮಂಜುನಾಥ್ ರವರು ವೈನ್ ಶಾಪ್ ಗೆ ಆಗಮಿಸಿದ್ದರು. ವೈನ್ ಶಾಪ್ ನಿಂದ ಹೊರಬಂದ ವೇಳೆ, ಆಟೋದಲ್ಲಿ ಆಗಮಿಸಿದ್ದ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ.
ಈ ವೇಳೆ ರಾಡ್ ನಿಂದ ಹರೀಶ್ ಹಾಗೂ ಮಂಜುನಾಥ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ವಿವರ ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
Shimoga, Feb 21: The incident in which two persons were fatally attacked in front of a wine shop took place on the evening of Feb 21 near Bluemoon Wines near Industrial Area on Sagar Road in Shimoga. Tunganagar station police visited the place of occurrence and conducted an investigation.

