ಶಿವಮೊಗ್ಗ (shivamogga), ಫೆ. 21: ಶಿವಮೊಗ್ಗದ ತಾಲೂಕಿನ ಸಕ್ರೆಬೈಲು ಆನೆ ಬಿಡಾರ ಸಮೀಪದ 10 ನೇ ಮೈಲಿಕಲ್ಲು ಬಳಿಯ ತುಂಗಾ ಜಲಾಶಯದ ಹಿನ್ನೀರಿನಲ್ಲಿ, ಇಬ್ಬರು ಪುರುಷ ಹಾಗೂ ಓರ್ವ ಮಹಿಳೆಯ ಮೃತದೇಹಗಳು ಪತ್ತೆಯಾದ ಘಟನೆ ಫೆ. 21 ರಂದು ನಡೆದಿದೆ.
10 ನೇ ಮೈಲಿಕಲ್ಲಿನ ಬಳಿಯಿಂದ ಅರಣ್ಯ ಪ್ರದೇಶದ ಒಳಕ್ಕೆ ತೆರಳಿದಾಗ ಸಿಗುವ, ತುಂಗಾ ಹಿನ್ನೀರಿನ ದಡದಲ್ಲಿ ಸದರಿ ಮೃತದೇಹಗಳು ಪತ್ತೆಯಾಗಿವೆ. ಶವಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೂರು ಮೃತದೇಹಗಳು ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಗುರುತು ಹಿಡಿಯುವುದು ಕಷ್ಟಕರವಾಗಿ ಪರಿಣಮಿಸಿದೆ. ಮೃತರ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ತುಂಗಾ ಹಿನ್ನೀರಿನಲ್ಲಿ ಏಕಕಾಲಕ್ಕೆ ಮೂರು ಶವ ಪತ್ತೆಯಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shimoga, Feb 21: The dead bodies of a woman and two men were found in the back water of Tunga reservoir near the 10 th milestone near Sakrebailu Elephant Camp in Shimoga Taluk on February 21.

