
shimoga | ಶಿವಮೊಗ್ಗ : ಕುಂಭಮೇಳದಿಂದ ಹಿಂದಿರುಗುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು!
ಶಿವಮೊಗ್ಗ (shivamogga), ಫೆ. 24: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭಮೇಳದಿಂದ ಹಿಂದಿರುಗುತ್ತಿದ್ದ ಶಿವಮೊಗ್ಗ ನಗರದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಫೆ. 24 ರಂದು ನಡೆದಿದೆ.
ಶಿವಮೊಗ್ಗದ ಬಸವೇಶ್ವರ ನಗರದ ನಿವಾಸಿ, ನಿವೃತ್ತ ವಿಮಾ ಅಧಿಕಾರಿ ಶ್ರೀನಿವಾಸ್ (71) ಮೃತಪಟ್ಟವರೆಂದು ಗುರುತಿಸಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.
ಶಿವಮೊಗ್ಗದ ಯೋಗ ಪಟು ಅನಿಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಕೆಲ ದಿನಗಳ ಹಿಂದೆ ಖಾಸಗಿ ವಾಹನಗಳಲ್ಲಿ ಸುಮಾರು 105 ಜನರು ಪ್ರಯಾಗ್ ರಾಜ್ ಕುಂಬಮೇಳಕ್ಕೆ ತೆರಳಿದ್ದೆವು. ಅಲ್ಲಿಂದ ಕಾಶಿ, ಅಯೋಧ್ಯೆ ಮೂಲಕ ಶಿವಮೊಗ್ಗಕ್ಕೆ ಹಿಂದಿರುಗಲಾಗುತ್ತಿತ್ತು.
ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಜಳಕಿ ಬಳಿ ಶ್ರೀನಿವಾಸ್ ಅವರು ಹೃದಯಾಘಾತಕ್ಕೆ ತುತ್ತಾಗಿದ್ದರು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ನಂತರ ಅವರನ್ನು ಇಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು.
ಅಲ್ಲಿಂದ ಆಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರವನ್ನು ಶಿವಮೊಗ್ಗ ನಗರಕ್ಕೆ ತರಲಾಗುತ್ತಿದೆ. ಸಂಜೆ 6 ಗಂಟೆ ವೇಳೆಗೆ ಶಿವಮೊಗ್ಗ ತಲುಪಲಿದ್ದೆವೆ’ ಎಂದು ಮಾಹಿತಿ ನೀಡಿದ್ದಾರೆ.
‘ಶ್ರೀನಿವಾಸ್ ಅವರ ನಿಧನವು ಅತೀವ ನೋವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ’ ಎಂದು ಯೋಗ ಗುರು ಅನಿಲ್ ಅವರು ಪ್ರಾರ್ಥಿಸಿದ್ದಾರೆ.
Shimoga, February 24: An incident occurred on February 24 when a person from Shimoga city died of heart attack while returning from the Prayag Raj Kumbh Mela in Uttar Pradesh.