Shivamogga: NSUI felicitates achievers as part of International Women's Day celebrations shimoga | ಶಿವಮೊಗ್ಗ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ

shimoga | ಶಿವಮೊಗ್ಗ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ

ಶಿವಮೊಗ್ಗ (shivamogga), ಮಾ. 8 : ಶಿವಮೊಗ್ಗ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜ್ ನಲ್ಲಿ, ಮಾ. 8 ರಂದು ಎನ್.ಎಸ್.ಯು.ಐ ಸಂಘಟನೆವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಣೆ ಮಾಡಿದ ಆಶಾ ಕಾರ್ಯಕರ್ತೆ ಆಶಾ ಹಾಗೂ ಯುವ ಪೀಳಿಗೆಗೆ ಮಾದರಿಯಾಗಿರುವ ಪ್ರಿಯಾಂಕ ಅವರನ್ನು ಸಂಘಟನೆವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಪ್ರಿಯಾಂಕ ಅವರು ಮಾತನಾಡಿ, ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು.  ಅವರು ಪುರುಷರಿಗಿಂತ ಕಡಿಮೆಯಿಲ್ಲ. ಅವರನ್ನು ಪ್ರೋತ್ಸಾಹಿಸಬೇಕಷ್ಟೆ. ಸಾಧನೆ ಮಾಡುವವರನ್ನು ತಡೆಯುವುದು ಸಾಧ್ಯವೂ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೀಶ್ ಮಾತನಾಡಿ, ಎನ್.ಎಸ್.ಯು.ಐ ಸಂಘಟನೆಯು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ ಆಚರಿಸಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ ಆಯೋಜಿಸಲಾಗಿತ್ತು. ಕರಾಟೆ ಪಟು ಮುರಳಿಯವರು ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿ ಜಿ ಮಧುಸೂಧನ್, ಕೆ ಚೇನತ್, ಎನ್.ಎಸ್.ಯು.ಐ  ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾರ್ಯದ್ಯಕ್ಷ ರವಿ ಕಾಟಿಕೆರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ತೌಫಿಕ್, ಜಿಲ್ಲಾ ಪದಾಧಿಕಾರಿಗಳಾದ ಅಭಿಷೇಕ್ ಗೌಡ ,ಸುಭಾನ್, ಫರಾಜ್, ಸುಜನ್, ಪ್ರದೀಪ್, ಇಂದ್ರಸೇನಾ, ಆದಿತ್ಯ, ಜೀವನ್, ಭುವನ್, ಕೃಷ್ಣ, ನಂದೀಶ್, ಸಂಗಮ್, ಲಿಂಗರಾಜು ಮೊದಲಾದವರಿದ್ದರು.

Shivamogga, March 8: An International Women’s Day celebration was organized by the NSUI organization on March 8 at the Government Women’s Degree College in Shivamogga city.

Shimoga | Shivamogga: When will the Upa Lokayukta hear the public's complaints? Where? shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಲಿರುವ ಉಪ ಲೋಕಾಯುಕ್ತರು, ಯಾವಾಗ? ಎಲ್ಲಿ? Previous post shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಲಿರುವ ಉಪ ಲೋಕಾಯುಕ್ತರು, ಯಾವಾಗ? ಎಲ್ಲಿ?
Shimoga | Scorching heat in the malnad : The administration needs to wake up! shimoga | ಮಲೆನಾಡಿನಲ್ಲಿ ರಣ ಬಿಸಿಲು : ಎಚ್ಚೆತ್ತುಕೊಳ್ಳಬೇಕಾಗಿದೆ ಆಡಳಿತ! Next post shimoga | ಮಲೆನಾಡಿನಲ್ಲಿ ರಣ ಬಿಸಿಲು : ಎಚ್ಚೆತ್ತುಕೊಳ್ಳಬೇಕಾಗಿದೆ ಆಡಳಿತ!