Shivamogga: Married man who mysteriously disappeared? ಶಿವಮೊಗ್ಗ : ನಿಗೂಢವಾಗಿ ಕಣ್ಮರೆಯಾದ ವಿವಾಹಿತ ವ್ಯಕ್ತಿ?

shimoga | ಶಿವಮೊಗ್ಗ : ನಿಗೂಢವಾಗಿ ಕಣ್ಮರೆಯಾದ ವಿವಾಹಿತ ವ್ಯಕ್ತಿ!

 ಶಿವಮೊಗ್ಗ (shivamogga), ಮಾ. 11 : ಶಿವಮೊಗ್ಗ ನಗರದ ನವುಲೆಯ ತ್ರಿಮೂರ್ತಿನಗರದಲ್ಲಿ ವಿವಾಹಿತ ವ್ಯಕ್ತಿಯೋರ್ವರು ನಿಗೂಢವಾಗಿ ಕಣ್ಮರೆಯಾದ ಘಟನೆ ನಡೆದಿದೆ.

ಈ ಕುರಿತಂತೆ ಮಾ.11 ರಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಸಂದೀಪ್ ಎಸ್. ಬಿನ್ ಷಣ್ಮುಖಪ್ಪ (35) ನಾಪತ್ತೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಕೋಟೆ ರಸ್ತೆಯಲ್ಲಿರುವ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಮಾ.06 ರಂದು ಮನೆಯಿಂದ ಮೆಡಿಕಲ್ ಶಾಪ್‌ಗೆ ಎಂದು ಹೋದವರು ಮನೆಗೆ ಹಿಂದಿರುಗೆ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಇವರ ಸುಳಿವು ಲಭ್ಯವಾಗಿಲ್ಲ.

ಸದರಿ ವ್ಯಕ್ತಿಯ ಚಹರೆ : 5.6 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. 

ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ.

ಸದರಿ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Shivamogga, March 11: A married man has mysteriously disappeared in Trimurti Nagar, Navule, Shivamogga city. The police department issued a press release in this regard on March 11. The missing person has been identified as Sandeep S. Bin Shanmukhappa (35). He worked at a beauty parlor on Kote Road.

If you have any information about the said person, please contact the Shivamogga Rural Police Station at 08182-261400/261418/9480803332/9480803350 and provide information, the police release said.

Shivamogga: There will be no electricity in these areas on October 15th! ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ! Previous post shimoga | ಶಿವಮೊಗ್ಗ ನಗರದ ವಿವಿಧೆಡೆ ಮಾ.12 ರಂದು ವಿದ್ಯುತ್ ವ್ಯತ್ಯಯ!
shimoga | E-Khata confusion: What did the Shimoga Municipal Commissioner say? shimoga | ಇ – ಖಾತಾ ಗೊಂದಲ : ಶಿವಮೊಗ್ಗ ಪಾಲಿಕೆ ಆಯುಕ್ತರು ಹೇಳಿದ್ದೇನು? Next post shimoga | ಇ – ಖಾತಾ ಗೊಂದಲ : ಶಿವಮೊಗ್ಗ ಪಾಲಿಕೆ ಆಯುಕ್ತರು ಹೇಳಿದ್ದೇನು?