shimoga | ಶಿವಮೊಗ್ಗ ನಗರದ ವಿವಿಧೆಡೆ ಮಾ.12 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ (shivamogga), ಮಾ. 11: ಶಿವಮೊಗ್ಗ ನಗರದ ಹೊರವಲಯ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ, ಮಾ. 12 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಮಾ.12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಎಸ್.ವಿ.ಬಡಾವಣೆ ಎ ಯಿಂದ ಎಫ್ ಬ್ಲಾಕ್, ಸ್ವಿಮಿಂಗ್ ಫೂಲ್‌ನ ಸುತ್ತಮುತ್ತ, ಮಹಿಳಾ ಪಾಲಿಟೆಕ್ನಿಕ್, ರಾಮಕೃಷ್ಣ ಐಟಿಐ ಕಾಲೇಜ್, ಸ್ನೇಹ ಅಪಾರ್ಟ್’ಮೆಂಟ್, ಚಂದನ ಪಾರ್ಕ್,
ಗಾಡಿಕೊಪ್ಪ ಜ್ಞಾನಗಂಗಾ ಶಾಲೆ, ಕಾಳಿದಾಸ ಬಡಾವಣೆ, ನಂಜಪ್ಪ ಲೈಫ್ ಕೇರ್, ಸಂಭ್ರಮ ಅಪಾರ್ಟ್’ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga, Mar 11: Emergency work has been carried out on Mar 12 within the Alkola power distribution center on the outskirts of Shivamogga city, Mescom said. A press release has been issued in this regard. MESCOM has informed that due to emergency work, there will be disruption in power supply in the following areas from 10 am to 5 pm on March 12.
There will be power outages in SV Layout A to F Block, around the swimming pool, Mahila Polytechnic, Ramakrishna ITI College, Sneha Apartments, Chandana Park, Gadikoppa Gyanaganga School, Kalidasa Layout, Nanjappa Life Care, Sambhrama Apartments and surrounding areas.
