shimoga | E-Khata confusion: What did the Shimoga Municipal Commissioner say? shimoga | ಇ – ಖಾತಾ ಗೊಂದಲ : ಶಿವಮೊಗ್ಗ ಪಾಲಿಕೆ ಆಯುಕ್ತರು ಹೇಳಿದ್ದೇನು?

shimoga | ಇ – ಖಾತಾ ಗೊಂದಲ : ಶಿವಮೊಗ್ಗ ಪಾಲಿಕೆ ಆಯುಕ್ತರು ಹೇಳಿದ್ದೇನು?

ಶಿವಮೊಗ್ಗ (shivamogga), ಮಾ. 10: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಸ್ಥಿರಾಸ್ತಿಗಳಿಗೆ ಇ – ಖಾತಾ ನೀಡುವ ಪ್ರಕ್ರಿಯೆ ಬಿರುಸುಗೊಳಿಸುವ ಉದ್ದೇಶದಿಂದ ವಾರ್ಡ್ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಿಳಿಸಿದ್ದಾರೆ.

ಮಾರ್ಚ್ 11 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಷ್ಟರಲ್ಲಿಯೇ ಮೂರು ಕಡೆ ಪಾಲಿಕೆಯ ವಲಯ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ವಲಯ ಕಚೇರಿಗಳ ಮುಖಾಂತರ ಇ – ಖಾತಾ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಎ ಖಾತಾ ಹಾಗೂ ಬಿ ಖಾತಾ ಮಾಡಿಸಲು ಅಗತ್ಯವಿರುವ ದಾಖಲಾತಿಗಳ ವಿವರಗಳನ್ನು ನಾಗರೀಕರಿಗೆ ಗಮನಕ್ಕೆ ತರುವ ಕಾರ್ಯ ನಡೆಸಲಾಗಿದೆ. ಕಚೇರಿಯಲ್ಲಿಯೂ ಕಾಲಮಿತಿಯೊಳಗೆ ನಾಗರೀಕರಿಗೆ ಕೆಲಸ ಮಾಡಿಕೊಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಪಂ ಪ್ರದೇಶ : ಕಳೆದ ಸುಮಾರು 30 ವರ್ಷಗಳ ಹಿಂದೆ ಗ್ರಾಮ ಪಂಚಾಯ್ತಿಗಳಿಂದ ಪಾಲಿಕೆಗೆ ಹಸ್ತಾಂತರವಾಗಿರುವ ಪ್ರದೇಶಗಳ ಸ್ಥಿರಾಸ್ತಿಗಳಿಗೆ, ಇ-ಖಾತಾ ಮಾಡಿಕೊಡುವಲ್ಲಿ ಆಗುತ್ತಿರುವ ಗೊಂದಲದ ಕುರಿತಾದ ಪ್ರಶ್ನೆಗೆ ಆಯುಕ್ತರು ಪ್ರತಿಕ್ರಿಯಿಸಿ, ‘

‘ಸದರಿ ಪ್ರದೇಶಗಳ ಸ್ಥಿರಾಸ್ತಿಗಳ ದಾಖಲಾತಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ದಾಖಲಾತಿಗಳಿಗೆ ಅನುಗುಣವಾಗಿ ಎ ಖಾತಾ ಅಥವಾ ಬಿ ಖಾತಾ ನೀಡುವಂತೆ ಈಗಾಗಲೇ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಬಿ ಖಾತಾಕ್ಕೆ ರಾಜ್ಯ ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ರೆವಿನ್ಯೂ ಪ್ರದೇಶಗಳ ಸ್ಥಿರಾಸ್ತಿಗಳ ಮಾಲೀಕರು ಸೂಕ್ತ ದಾಖಲಾತಿ ಸಲ್ಲಿಸಿ ಇ – ಖಾತಾ ಮಾಡಿಸಿಕೊಳ್ಳಬೇಕು ಎಂದು ಇದೇ ವೇಳೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವರು ಮನವಿ ಮಾಡಿದ್ದಾರೆ.

Shivamogga, Mar. 10: Shivamogga Municipal Corporation Commissioner Kavita Yogappanavar said that a public awareness campaign will be conducted at the ward level with the aim of streamlining the process of issuing e-khata for immovable properties within the limits of the Shivamogga Municipal Corporation.

He spoke to reporters who contacted him on March 11. He said that the zonal offices of the corporation in three places will be operational by then. The e-khata process will be further expedited through the zonal offices.

Shivamogga: Married man who mysteriously disappeared? ಶಿವಮೊಗ್ಗ : ನಿಗೂಢವಾಗಿ ಕಣ್ಮರೆಯಾದ ವಿವಾಹಿತ ವ್ಯಕ್ತಿ? Previous post shimoga | ಶಿವಮೊಗ್ಗ : ನಿಗೂಢವಾಗಿ ಕಣ್ಮರೆಯಾದ ವಿವಾಹಿತ ವ್ಯಕ್ತಿ!
Shivamogga: The body of an unidentified woman was found near a bar! ಶಿವಮೊಗ್ಗ : ಬಾರ್ ಸಮೀಪ ಅಪರಿಚಿತ ಮೃತ ಮಹಿಳೆಯ ಮೃತದೇಹ ಪತ್ತೆ! Next post shimoga | anandpura | ಅಪರಿಚಿತ ಮಹಿಳೆ ಶವ ಪತ್ತೆ : ಬಲಗೈ ಮೇಲಿದೆ ಮುರುಗೇಶ್ ಹೆಸರಿನ ಹಚ್ಚೆ ಗುರುತು!