shimoga rain | ಶಿವಮೊಗ್ಗ : ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆ!

Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ!

ಶಿವಮೊಗ್ಗ (shivamogga), ಏ.20: ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಏ.20 ರ ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಯಿತು!

ಬೆಳಿಗ್ಗೆಯಿಂದಲೆ ನಗರದಲ್ಲಿ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಿತ್ತು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನೆಲೆಸಿತ್ತು. ಸಂಜೆಯಿಂದ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಬೀಳಲಾರಂಭಿಸಿತು.

ಸುಮಾರು 1 ಗಂಟೆಗೂ ಅಧಿಕ ಕಾಲ ನಗರದಲ್ಲಿ ಎಡೆಬಿಡದೆ ಮಳೆ ಸುರಿಯಿತು. ಕೆಲ ದಿನಗಳ ನಂತರ ಬಿದ್ದ ಮಳೆಯಿಂದ ನಾಗರೀಕರಲ್ಲಿ ನಿರಾಳ ಭಾವ ಮೂಡಿಸಿತ್ತು. ಕಾದ ಕಾವಲಿಯಂತಾಗಿದ್ದ ಇಳೆ ತಂಪಾಗುವಂತಾಯಿತು.

ಭಾರೀ ಮಳೆ ಕಾರಣದಿಂದ ನಗರದ ಹಲವೆಡೆ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ಜನ – ವಾಹನ ಸಂಚಾರ ಅಸ್ತವ್ಯಸ್ತವಾಗುವಂತಾಗಿತ್ತು.

ಶಿವಮೊಗ್ಗ ನಗರ ಮಾತ್ರವಲ್ಲದೆ ಹೊರವಲಯದ ಪ್ರದೇಶಗಳು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಧಾರಾಕಾರ ಮಳೆಯಾದ ವರದಿಗಳು ಬಂದಿವೆ.

Shivamogga, April 20: Heavy rain accompanied by thunder and lightning has started falling in many places in Shivamogga city and taluk since the evening of April 20!

The city was scorching hot since morning. The weather became cloudy after noon. Heavy rains started falling with strong winds and thunderstorms in the evening.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →