thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿ ಯುವತಿ!

thirthahalli | 19-year-old girl from Thirthahalli mysteriously disappears! thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿಯ 19 ವರ್ಷದ ಯುವತಿ!

ಶಿವಮೊಗ್ಗ (shivamogga), ಏ. 24: ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮದ ಯುವತಿಯೋರ್ವಳು ನಿಗೂಢವಾಗಿ ಕಣ್ಮರೆಯಾದ ಘಟನೆ ನಡೆದಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ಎಂಬುವವರ ಪುತ್ರಿ, 19 ವರ್ಷದ ಪ್ರಿಯಾಂಕ ಅಲಿಯಾಸ್ ಪಾರ್ವತಿ ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ.

ಯುವತಿಯು ಬ್ರಹ್ಮಾವರದ ಸತ್ಯನಾಥ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಏ. 21 ರಂದು ಬೆಳಿಗ್ಗೆ 9 ಗಂಟೆಗೆ ಬ್ರಹ್ಮಾವರಕ್ಕೆ ಹೋಗುವುದಾಗಿ ಯುವತಿ ಮನೆಯಿಂದ ತೆರಳಿದ್ದರು. ತದನಂತರ ಅವರ ಸುಳಿವು ಲಭ್ಯವಾಗಿಲ್ಲ. ಅವರ ಕುರಿತಂತೆ ಎಲ್ಲಿಯೂ ಮಾಹಿತಿ ಲಭಿಸಿಲ್ಲ.

ಚಹರೆ : ನಾಪತ್ತೆಯಾದ ಯುವತಿಯು 4 ಅಡಿ 5 ಇಂಚು ಎತ್ತರ, ಕೋಲುಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡಕೈ ಮುಂಗೈ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ MOM DAD  ಮತ್ತು Priya ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾರೆ.

ಕನ್ನಡ ಮಾತನಾಡಲು, ಓದಲು ಬರೆಯಲು ಬಲ್ಲವರಾಗಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.

ಸದರಿ ಯುವತಿಯ ಸುಳಿವು ಪತ್ತೆಯಾದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ದೂರವಾಣಿ :- 08182-261400, ತೀರ್ಥಹಳ್ಳಿ ಪೊಲೀಸ್ ಠಾಣೆ :- 08181 – 220388, ಮಾಳೂರು ಪೊಲೀಸ್ ಠಾಣೆ :- 9480803333, ಆಗುಂಬೆ ಪೊಲೀಸ್ ಠಾಣೆ :- 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga, Apr. 24: A young woman from Honnethalu village in Thirthahalli taluk has mysteriously disappeared. A case has been registered at Agumbe police station in this regard.

If anyone has any information about the young woman, contact Shivamogga District police : 08182-261400, Thirthahalli police station: 08181 – 220388, Malur police station: 9480803333, Agumbe police station: 9480803314, the police statement said.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →