shimoga | Will the CEO of the GPM flow towards the largest village panchayat in Shimoga district? shimoga | ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯ್ತಿಯತ್ತ ಹರಿಯುವುದೆ ಜಿಪಂ ಸಿಇಓ ಚಿತ್ತ?

shimoga | ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯ್ತಿಯತ್ತ ಹರಿಯುವುದೆ ಜಿಪಂ ಸಿಇಓ ಚಿತ್ತ?

ಶಿವಮೊಗ್ಗ (shivamogga), ಮೇ 14: ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯು, ಇಡೀ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಪಂ ಆಗಿದೆ. ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೆ, ವಸತಿ ಬಡಾವಣೆಗಳನ್ನು ಸದರಿ ಗ್ರಾಪಂ ಅಧೀನದಲ್ಲಿದೆ. ಸಾಕಷ್ಟು ವ್ಯಾಪ್ತಿ, ವಿಸ್ತೀರ್ಣ, ಜನಸಂಖ್ಯೆಬಾಹುಳ್ಯ ಹೊಂದಿದೆ.

7 ಹಳ್ಳಿಗಳು ಸೇರಿದಂತೆ ಸರಿಸುಮಾರು 30 ಕ್ಕೂ ಅಧಿಕ ಜನವಸತಿ ಬಡಾವಣೆಗಳು ಸದರಿ ಗ್ರಾಪಂ ಆಡಳಿತ ವ್ಯಾಪ್ತಿಯಲ್ಲಿದೆ. ಕೆಲ ಬಡಾವಣೆಗಳು ಸ್ಯಾಟಲೈಟ್ ಟೌನ್ ಗಳ ರೀತಿ ಅಭಿವೃದ್ದಿ ಹೊಂದುತ್ತಿವೆ! ಸಾವಿರಾರು ಜನರು ವಾಸಿಸುತ್ತಿದ್ದಾರೆ. ಶಿವಮೊಗ್ಗ ಪಾಲಿಕೆಯ ಎರಡ್ಮೂರು ವಾರ್ಡ್ ಗಳ ವ್ಯಾಪ್ತಿ, ವಿಸ್ತೀರ್ಣವನ್ನು ಅಬ್ಬಲಗೆರೆ ಗ್ರಾಪಂ ಆಡಳಿತವೊಂದೆ ಒಳಗೊಂಡಿದೆ.

ಇದರಿಂದ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂ ಬಡಾವಣೆಗಳ ಪರಿಣಾಮಕಾರಿ ನಿರ್ವಹಣೆ, ಆಡಳಿತಕ್ಕೆ ಕಷ್ಟಸಾಧ್ಯವಾಗಿ ಪರಿಣಮಿಸುತ್ತಿದೆ. ನಾಗರೀಕರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲು ಹಾಗೂ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು ಅನುದಾನ ಮತ್ತು ಇತರೆ ಸಂಪನ್ಮೂಲಗಳ ಕೊರತೆ ಎದುರಾಗುತ್ತಿದೆ.

ಕುಡಿಯುವ ನೀರು ಪೂರೈಕೆ, ಹೊಸ ರಸ್ತೆ ನಿರ್ಮಾಣ – ದುರಸ್ತಿ, ಬೀದಿ ದೀಪ, ಸ್ವಚ್ಛತೆ, ಉದ್ಯಾನವನಗಳ ಅಭಿವೃದ್ದಿ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತುಹಲವು ಮೂಲಸೌಕರ್ಯ ವ್ಯವಸ್ಥೆಗಳಿಗೆ ಅನುದಾನ ಹೊಂದಿಸುವುದು ಗ್ರಾಪಂ ಆಡಳಿತಕ್ಕೆ ದಿನದಿಂದ ದಿನಕ್ಕೆ ಹೊರೆಯಾಗಿ ಪರಿಣಮಿಸಲಾರಂಭಿಸಿದೆ.

ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ, ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಅಬ್ಬಲಗೆರೆ ಗ್ರಾಪಂಗೆ ಕಾಯಕಲ್ಪದ ಅವಶ್ಯಕತೆಯಿದೆ. ಜನಸಂಖ್ಯೆ – ವಿಸ್ತೀರ್ಣಕ್ಕೆ ಅನುಗುಣವಾಗಿ ಆಡಳಿತದಿಂದ ಅನುದಾನ, ಸೌಲಭ್ಯಗಳು ಹಂಚಿಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಜಿಪಂ ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.

*** ‘ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತವಿದೆ. 7 ಹಳ್ಳಿಗಳು ಸೇರಿದಂತೆ ಸುಮಾರು 30 ಕ್ಕೂ ಅಧಿಕ ಜನವಸತಿ ಬಡಾವಣೆಗಳು ಗ್ರಾಪಂ ಅಧೀನದಲ್ಲಿದೆ. ಇದರಿಂದ ಪಾಲಿಕೆ ಬಡಾವಣೆಗಳಲ್ಲಿ ಲಭ್ಯವಾಗುವ ಮೂಲಸೌಕರ್ಯ – ಸೌಲಭ್ಯಗಳನ್ನು, ಗ್ರಾಪಂ ಅಧೀನದ ಬಡಾವಣೆಗಳ ನಾಗರೀಕರು ನಿರೀಕ್ಷೆ ಮಾಡುತ್ತಿದ್ದಾರೆ. ಇದರಿಂದ ಗ್ರಾಪಂ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ ಇತರೆ ಗ್ರಾಪಂಗಳಿಗೆ ಲಭ್ಯವಾಗುವ ಅನುದಾನವೇ, ಅಬ್ಬಲಗೆರೆ ಗ್ರಾಪಂಗೂ ಲಭ್ಯವಾಗುತ್ತಿದೆ. ಇದರಿಂದ ಪರಿಣಾಮಕಾರಿಯಾಗಿ ನಾಗರೀಕರ ಬೇಡಿಕೆಗಳಿಗೆ ಸ್ಪಂದನೆ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತಿದೆ.

ಈ ಕಾರಣದಿಂದ ಸದರಿ ಗ್ರಾಪಂನ್ನು ವಿಭಜಿಸಿ ಮತ್ತೊಂದು ಹೊಸ ಗ್ರಾಪಂ ಅಸ್ತಿತ್ವಕ್ಕೆ ತರಬೇಕಾಗಿದೆ. ಅಲ್ಲಿಯವರೆಗೂ ಗ್ರಾಪಂ ಪ್ರದೇಶ, ವಿಸ್ತೀರ್ಣ, ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಹಾಗೂ ಜಿಲ್ಲಾ ಪಂಚಾಯ್ತಿ ಆಡಳಿತದಿಂದ ಹೆಚ್ಚಿನ ಅನುದಾನ – ಸೌಲಭ್ಯಗಳನ್ನು ಕಲ್ಪಿಸಬೇಕು. ಹಾಗೆಯೇ ಅಭಿವೃದ್ದಿ ಹೊಂದಿದ, ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳು ಹಾಗೂ ಅದರ ವ್ಯಾಪ್ತಿಯಲ್ಲಿನ ಬಡಾವಣೆಗಳನ್ನು ಮಹಾನಗರ ಪಾಲಿಕೆ ಆಡಳಿತಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಅಬ್ಬಲಗೆರೆ ಗ್ರಾಪಂ ಆಡಳಿತಕ್ಕೂ ಸಹಕಾರಿಯಾಗಲಿದೆ’ ಎಂದು ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ರಾಜಶೇಖರಪ್ಪ ಅವರು ಅಭಿಪ್ರಾಯಪಡುತ್ತಾರೆ.

*** ಪ್ರಸ್ತುತ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮನೆ ಮನೆಗೆ ತೆರಳಿ ಘನತ್ಯಾಜ್ಯ ಸಂಗ್ರಹಣೆ ಮಾಡಲು ಪ್ರತ್ಯೇಕ ಸರಕು-ಸಾಗಾಣೆ ವಾಹನ ಹಾಗೂ ಮಹಿಳಾ ಸಿಬ್ಬಂದಿಗಳಿದ್ದಾರೆ. ಆದರೆ ಗ್ರಾಪಂ ವ್ಯಾಪ್ತಿ ಅತೀ ದೊಡ್ಡದಾಗಿರುವ ಕಾರಣದಿಂದ, ಕೆಲ ಬಡಾವಣೆಗಳಿಗೆ ಪ್ರತಿನಿತ್ಯ ಘನತ್ಯಾಜ್ಯ ಸಂಗ್ರಹಣೆಯ ವಾಹನ ಆಗಮಿಸುತ್ತಿಲ್ಲ. ಇದರಿಂದ ಕೆಲ ನಾಗರೀಕರು ಎಲ್ಲೆಂದರಲ್ಲಿ ಹಸಿ – ಒಣ ಕಸ ಎಸೆಯುವಂತಾಗಿದೆ.

ಪ್ರಸ್ತುತವಿರುವ ವಾಹನವು ಹಳೇಯದಾಗಿದ್ದು, ನಿರಂತರವಾಗಿ ರಿಪೇರಿಗೆ ಬರುತ್ತಿದೆ. ಇತ್ತೀಚೆಗೆ ಎರಡ್ಮೂರು ವಾರಗಳ ಕಾಲ ವಾಹನ ರಿಪೇರಿಗೆ ಬಿಟ್ಟಿದ್ದ ಕಾರಣದಿಂದ, ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಸಂಪೂರ್ಣ ಸ್ಥಗಿತವಾಗುವಂತಾಗಿತ್ತು. ಈ ಕಾರಣದಿಂದ ಘನತ್ಯಾಜ್ಯ ಸಂಗ್ರಹಣೆಗೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಮತ್ತೊಂದು ವಾಹನದ ತುರ್ತು ಅವಶ್ಯಕತೆಯಿದೆ ಎಂದು ಕೆಲ ನಿವಾಸಿಗಳು ಆಗ್ರಹಿಸುತ್ತಾರೆ.

Shivamogga, May 14: The Abbalagere Gram Panchayat, which is adjacent to the city of Shivamogga, is the largest Gram Panchayat in the entire district. Not only rural areas, but also residential areas are under the jurisdiction of the said Gram Panchayat. It has a sufficient scope, area, and population. Approximately 30 settlements, including 7 villages, are under the administrative jurisdiction of the said gram panchayat. Some of the settlements are developing like satellite towns! Thousands of people live there.

shimoga | Details of vegetable prices for June 20 in Shivamogga APMC wholesale market shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 14 ರ ತರಕಾರಿ ಬೆಲೆಗಳ ವಿವರ
Shimoga | Application invited for PSI recruitment exam pre-training shimoga | ಪಿಎಸ್‌ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ Next post shimoga | ಪಿಎಸ್‌ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ