The deceased has been identified as Anavatti Police Station ASI Basavarajappa (50). He is originally from Shikaripura taluk. shimoga | ಅಪಘಾತದಲ್ಲಿ ಗಾಯಗೊಂಡಿದ್ದ ಆನವಟ್ಟಿ ಪೊಲೀಸ್ ಠಾಣೆ ಎಎಸ್ಐ ಸಾವು!

shimoga | ಅಪಘಾತದಲ್ಲಿ ಗಾಯಗೊಂಡಿದ್ದ ಆನವಟ್ಟಿ ಪೊಲೀಸ್ ಠಾಣೆ ಎಎಸ್ಐ ಸಾವು!

ಶಿವಮೊಗ್ಗ (shivamogga), ಜು. 6: ರಸ್ತೆ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಹಾಯಕ ಸಬ್ ಇನ್ಸ್’ಪೆಕ್ಟರ್ (ಎಎಸ್ಐ) ಓರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜುಲೈ 5 ರಂದು ನಡೆದಿದೆ.

ಆನವಟ್ಟಿ ಪೊಲೀಸ್ ಠಾಣೆ ಎಎಸ್ಐ ಬಸವರಾಜಪ್ಪ (50) ಮೃತಪಟ್ಟವರೆಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್ 30, 2025 ರ ರಾತ್ರಿ ಬಸವರಾಜಪ್ಪ ಅವರು ಬೈಕ್ ನಲ್ಲಿ ಶಿರಾಳಕೊಪ್ಪಕ್ಕೆ ಆಗಮಿಸುತ್ತಿದ್ದ ವೇಳೆ, ವಾಹನವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋಮಾ ಸ್ಥಿತಿಯಲ್ಲಿದ್ದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಶಿಕಾರಿಪುರ ಪಟ್ಟಣದಲ್ಲಿರುವ ಮನೆಗೆ ಕರೆತರಲಾಗಿತ್ತು. ಆದರೆ ಜು. 5 ರಂದು ಅವರು ವಿಧಿವಶರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಸಂತಾಪ : ಎಎಸ್ಐ ಬಸವರಾಜಪ್ಪ ಅವರ ನಿಧನಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Shivamogga, Jul. 6: An Assistant Sub-Inspector (ASI) who was injured in a road accident and was unconscious died on Jul. 5. The deceased has been identified as Anavatti Police Station ASI Basavarajappa (50). He is originally from Shikaripura taluk.

shimoga | Shivamogga: Ragigudda case – Two in police custody! ಶಿವಮೊಗ್ಗ : ರಾಗಿಗುಡ್ಡ ಪ್ರಕರಣ – ಇಬ್ಬರು ಪೊಲೀಸ್ ವಶಕ್ಕೆ! Previous post shimoga | ಶಿವಮೊಗ್ಗ : ರಾಗಿಗುಡ್ಡ ಪ್ರಕರಣ – ಇಬ್ಬರು ಪೊಲೀಸ್ ವಶಕ್ಕೆ!
shimoga APMC vegetable prices | Details of vegetable prices for December 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 11 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 7 ರ ತರಕಾರಿ ಬೆಲೆಗಳ ವಿವರ