
soraba | ಸೊರಬ – ಭಾರೀ ಮಳೆಗೆ ಕುಸಿಯುತ್ತಿರುವ ಕೆರೆ ಏರಿ : ಗ್ರಾಮಸ್ಥರಲ್ಲಿ ಆತಂಕ!
ಸೊರಬ (sorab), ಜು. 27: ಇತ್ತೀಚೆಗೆ ಬೀಳುತ್ತಿರುವ ಭಾರೀ ಮಳೆಯು, ಸೊರಬ ತಾಲೂಕಿನ ವಿವಿಧೆಡೆ ನಾನಾ ಅವಾಂತರಗಳು ಸೃಷ್ಟಿಯಾಗುವಂತೆ ಮಾಡಿದೆ!
ತಾಲೂಕಿನ ದೇವತಿ ಕೊಪ್ಪ ಉರಗನಹಳ್ಳಿಯ ದೊಡ್ಡ ಕೆರೆ ಏರಿಯು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿಯಲಾರಂಭಿಸಿದೆ. ತಗ್ಗು ಪ್ರದೇಶದ ಅಪಾರ ಪ್ರಮಾಣದ ಕೃಷಿ ಭೂಮಿಗೆ ನೀರು ನುಗ್ಗುವ ಆತಂಕ ಸ್ಥಳೀಯ ಗ್ರಾಮಸ್ಥರಲ್ಲಿ ಎದುರಾಗಿದೆ.
ಬೇಸಿಗೆಯ ಸಮಯದಲ್ಲಿ ಇಲ್ಲಿನ ಕೃಷಿ ಜಮೀನಿಗೆ ಈ ಕೆರೆಯು ಪ್ರಮುಖ ನೀರಾವರಿ ಮೂಲವಾಗಿದ್ದು ಪ್ರತಿ ವರ್ಷ ಕೆರೆ ಏರಿ ಕುಸಿಯುತ್ತಿರುವುದರಿಂದ ತಕ್ಷಣವೇ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸುವ ಕಡೆ ಕಾರ್ಯೋನ್ಮುಖವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿಂದೆ 46 ಲಕ್ಷ ರೂ. ವೆಚ್ಚದಲ್ಲಿ ನಡೆಸಲಾಗಿದ್ದ ಕಾಮಗಾರಿಯು ಉಪಯೋಗಕ್ಕೆ ಬಾರದಂತಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಾಮಗಾರಿಯಾಗಿದ್ದು, ವಾಸ್ತವವಾಗಿ ಯಾವುದೇ ಉಪಯೋಗವಾಗಿಲ್ಲ ಎಂದು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಜಯ್ ದೇವತಿಕೊಪ್ಪ ಆರೋಪಿಸಿದ್ದಾರೆ.
(ವರದಿ: ವಿಕಾಸ್ ಕ್ಯಾಸನೂರು)
Soraba, July 27: The recent heavy rains have caused various disturbances in various parts of Soraba taluk! The large lake in Devathi Koppa Uraganahalli village of the taluk has started to collapse it’s budn, due to heavy rains for the past three days. Local villagers are worried that water will enter a vast area of agricultural land in the low-lying areas.