
cyber crime news | ಫೇಸ್’ಬುಕ್ ಜಾಹೀರಾತು ನಂಬಿ ಲಕ್ಷ ಲಕ್ಷ ರೂ. ಕಳೆದುಕೊಂಡ ಭದ್ರಾವತಿ ವ್ಯಕ್ತಿ!’
ಶಿವಮೊಗ್ಗ (shimoga), ಜು. 29: ಫೇಸ್’ಬುಕ್ ಸಾಮಾಜಿಕ ಜಾಲತಾಣದಲ್ಲಿ ಬಂದ ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿದ ಜಾಹೀರಾತು ನಂಬಿದ ವ್ಯಕ್ತಿಯೋರ್ವರು, ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಈ ಕುರಿತಂತೆ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ರವೀಂದ್ರನಾಥ್ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಒಟ್ಟಾರೆ 6,83,127 ರೂ.ಗಳನ್ನು ಸೈಬರ್ ವಂಚಕರು ಮೋಸ ಮಾಡಿದ್ಧಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ಧಾರೆ.
ವಂಚನೆ ಹೇಗೆ? : ರವೀಂದ್ರನಾಥ್ ಅವರು ಫೇಸ್’ಬುಕ್ ನೋಡುತ್ತಿದ್ದಾಗ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಕುರಿತಂತೆ ಜಾಹೀರಾತೊಂದು ಬಂದಿದೆ. ಆ್ಯಪ್ ವೊಂದರಲ್ಲಿ ಹಣ ಹೂಡಿಕೆ ಮಾಡಿ ಷೇರುಗಳನ್ನು ಖರೀದಿಸಿದರೆ, ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂದೇಶ ಗಮನಿಸಿದ್ದಾರೆ.
ಸದರಿ ಮಾಹಿತಿ ನಂಬಿ ಹಂತ ಹಂತವಾಗಿ 6,83,127 ರೂ.ಗಳನ್ನು ಆನ್’ಲೈನ್ ಮೂಲಕ ಹೂಡಿಕೆ ಮಾಡಿದ್ದಾರೆ. ನಂತರ ಹಣ ವಿತ್ ಡ್ರಾ ಮಾಡಲು ಮುಂದಾದ ವೇಳೆ, ಆ್ಯಪ್ ಲಾಕ್ ಆಗಿದೆ. ಸೈಬರ್ ವಂಚಕರಿಂದ ಮೋಸ ಹೋಗಿರುವುದು ಗೊತ್ತಾಗಿದೆ.
Shivamogga, July 29: A person who believed an advertisement related to stock market investment on the social networking site Facebook lost lakhs of rupees. A complaint has been registered at the Shivamogga Cyber Police Station in this regard.