Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!

shimoga | ಶಿವಮೊಗ್ಗ : ನಾಲೆಯಲ್ಲಿ ಅನಾಮಧೇಯ ಪುರುಷನ ಶ**ವ ಪತ್ತೆ!

ಶಿವಮೊಗ್ಗ (shivamogga), ಆಗಸ್ಟ್ 13: ಶಿವಮೊಗ್ಗ ತಾಲೂಕಿನ ಕ್ಯಾತನಕೊಪ್ಪದಿಂದ ಸೂಗೂರಿಗೆ ಹೋಗುವ ತುಂಗಾ ಮೇಲ್ದಂಡೆ ಚಾನಲ್ ನೀರಿನಲ್ಲಿ, ಅನಾಮಧೇಯ ಪುರುಷನ ಶ**ವ ಪತ್ತೆಯಾದ ಘಟನೆ ನಡೆದಿದೆ.

ಕ್ಯಾತನಕೊಪ್ಪದಿಂದ ಸೂಗೂರಿನ ನಡುವಿನ ಗುರಕಳ್ಳೇರ ಶಿವಣ್ಣನವರ ಅಡಿಕೆ ತೋಟದ ಹತ್ತಿರವಿರುವ ತುಂಗಾ ಚಾನಲ್ ಸೇತುವೆಯ ನಡುವಿನ ಪಿಲ್ಲರ್ ಕಂಬದ ಬಳಿ ಶ**ವ ಪತ್ತೆಯಾಗಿದೆ.

ಚಹರೆ: ಸುಮಾರು 30 ರಿಂದ 40 ವರ್ಷ ವಯೋಮಾನವಿದೆ. 5.6 ಅಡಿ ಎತ್ತರ, ದುಂಡು ಮುಖ, ಕಂದು ಬಣ್ಣ ಹೊಂದಿದ್ದು, ದಪ್ಪನೆಯ ಮೈಕಟ್ಟು ಹೊಂದಿರುತ್ತಾರೆ.

ಮೃತದೇಹವು ಭಾಗಶಃ ಕೊಳತ ಸ್ಥಿತಿಯಲ್ಲಿದೆ. ತಲೆಯ ಕೂದಲು ಉದುರಿಹೋದಂತೆ ಕಂಡು ಬಂದಿರುತ್ತದೆ. ಮೃತನ ಬಲಮುಂಗೈಯಲ್ಲಿ ‘♡’ ಸಿಂಬಲ್ ಇದ್ದು ಅದರೊಳಗೆ ಐ ಮತ್ತು S ಹಚ್ಚೆ ಗುರುತು ಇರುತ್ತದೆ.

ಉಡುಪು : ಕೆಂಪು ಬಣ್ಣದ ಸ್ಯಾಂಡೋ ಬನಿಯನ್ ಹಾಗೂ ಕಡು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಬಲ ಮುಂಗೈಯಲ್ಲಿ ಕಬ್ಬಿಣದ ಕಡಗ ಇರುತ್ತದೆ.

ಮೃತ ವ್ಯಕ್ತಿಯ ಸಂಬಂಧಿಕರು ವಾರಸುದಾರರು ಪತ್ತೆಯಾದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ ಅಥವಾ ಪಿ.ಎಸ್.ಐ. ಗ್ರಾಮಾಂತರ ಪೊಲೀಸ್ ಠಾಣೆ ಶಿವಮೊಗ್ಗ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಶಿವಮೊಗ್ಗ ಪೋನ್ ನಂ 100 ಗೆ ಮಾಹಿತಿ ನೀಡಲು ಸೂಚಿಸಿದೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08182-261418, 261410, 261422, 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ನೀಡಿದೆ.

Shimoga, August 13: The body of an anonymous man was found in the Tunga upper bank channel water from Catanakoppa to Sooguri in Shimoga taluk.

Special task force police patrolling around Milaghat in Shimoga city! ಶಿವಮೊಗ್ಗ ನಗರದ ಮಿಳಘಟ್ಟ ಸುತ್ತಮುತ್ತ ಪೊಲೀಸರ ಪಥ ಸಂಚಲನ! Previous post shimoga news | ಶಿವಮೊಗ್ಗದ ಮಿಳಘಟ್ಟ ಸುತ್ತಮುತ್ತ ಪೊಲೀಸರ ಪಥ ಸಂಚಲನ!
Shimoga Tahsildar stopped the marriage of a minor man and woman! ತಾಳಿ ಕಟ್ಟುವ ವೇಳೆ ಶಿವಮೊಗ್ಗ ತಹಶೀಲ್ದಾರ್ ಎಂಟ್ರಿ : ಕಾರಣವೇನು? Next post shimoga | ತಾಳಿ ಕಟ್ಟುವ ವೇಳೆ ಶಿವಮೊಗ್ಗ ತಹಶೀಲ್ದಾರ್ ಎಂಟ್ರಿ : ಕಾರಣವೇನು?