Sagara - Fatal road accident : One dead, 8 injured! ಸಾಗರ - ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ!

sagara | ಸಾಗರ – ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ!

ಸಾಗರ (sagara), ಆಗಸ್ಟ್ 16: ಪಿಕಪ್ ಹಾಗೂ ಮಾರುತಿ ಓಮ್ನಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮ್ನಿಯಲ್ಲಿದ್ದ ಓರ್ವರು ಮೃತಪಟ್ಟು, 8 ಜನರು ಗಾಯಗೊಂಡ ಘಟನೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಬಲೇಗಾರು ಗ್ರಾಮದ ಬಳಿ ಆಗಸ್ಟ್ 16 ರಂದು ನಡೆದಿದೆ.

ಓಮ್ನಿಯಲ್ಲಿದ್ದವರು ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನವರಾಗಿದ್ದಾರೆ. ಇವರು ಜೋಗ ನೋಡಲು ತೆರಳುತ್ತಿದ್ದರು. ತಾಳಗುಪ್ಪದಿಂದ ಸಾಗರಕ್ಕೆ ಆಗಮಿಸುತ್ತಿದ್ದ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಓಮ್ನಿಯಲ್ಲಿದ್ದ ಶೇಖರ್ ಎಂಬುವರು ಮೃತಪಟ್ಟಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓಮ್ನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ದೌಡಾಯಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ಏರ್ಪಾಡು ಮಾಡಿದ್ದಾರೆ.

ಅಪಘಾತದಿಂದ ರಸ್ತೆಯಲ್ಲಿ ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನಾ ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Sagar, August 16: One person in the Omni died and 8 others were injured in a horrific accident between a pickup and a Maruti Omni on August 16 near Balegaru village near Talaguppa in Sagar taluk.

Shivamogga: Judge's surprise visit to Abbalagere Anganwadi - Meeting at Gram Panchayat office ಶಿವಮೊಗ್ಗ : ಅಬ್ಬಲಗೆರೆ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ – ಗ್ರಾಪಂ ಕಚೇರಿಯಲ್ಲಿ ಸಭೆ Previous post shimoga | ಶಿವಮೊಗ್ಗ : ಅಬ್ಬಲಗೆರೆ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ – ಗ್ರಾಪಂ ಕಚೇರಿಯಲ್ಲಿ ಸಭೆ
Sagara: Gas cylinder explosion at home! sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ! Next post sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ!