Sagara: Gas cylinder explosion at home! sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ!

sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ!

ಸಾಗರ (Sagara), ಆಗಸ್ಟ್ 17: ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ಹಲವರು ಗಾಯಗೊಂಡ ಘಟನೆ ಸಾಗರ ತಾಲೂಕಿನ ಚಿಪ್ಪಳ್ಳಿ ಸಮೀಪದ ಆದಿಶಕ್ತಿ ನಗರದಲ್ಲಿ ಆಗಸ್ಟ್ 16 ರಂದು ನಡೆದಿದೆ.

ವೆಂಕಟೇಶ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ವೆಂಕಟೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಕಿರಣ್ ಹಾಗೂ ಧರಣೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರಿಗೆ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರವಷ್ಟೆ ವೆಂಕಟೇಶ್ ಅವರ ಮನೆಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಲಾಗಿತ್ತು. ಗ್ಯಾಸ್ ಸಿಲಿಂಡರ್ ನಲ್ಲಿ ಲೀಕೇಜ್ ಇದ್ದದ್ದೇ ಸ್ಪೋಟಕ್ಕೆ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.

Sagara: Gas cylinder explosion at home! | Sagara, August 16: Several people were injured after a gas cylinder exploded in a house in Adishakti Nagar, Sagara town on August 16. The incident took place at the house of Venkatesh.

Sagara - Fatal road accident : One dead, 8 injured! ಸಾಗರ - ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ! Previous post sagara | ಸಾಗರ – ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ!
Shivamogga: 7-foot-long python found in car..! ಶಿವಮೊಗ್ಗ : ಕಾರಿನಲ್ಲಿ 7 ಅಡಿ ಉದ್ದದ ಹೆಬ್ಬಾವು..! Next post shimoga | ಶಿವಮೊಗ್ಗ : ಕಾರಿನಲ್ಲಿ 7 ಅಡಿ ಉದ್ದದ ಹೆಬ್ಬಾವು..!