ಶಿವಮೊಗ್ಗ (shivamogga), ಅಕ್ಟೋಬರ್ 5: ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು, ಅಕ್ಟೋಬರ್ 6 ರಿಂದ 2026 ಜನವರಿ 5 ರ ಮೂರು ತಿಂಗಳ ಕಾಲ, ಕೆಲ ರೈಲುಗಳ ಪ್ರಯೋಗಾತ್ಮಕ ತಾತ್ಕಾಲಿಕ ನಿಲುಗಡೆಯನ್ನು, ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಮುಂದುವರಿಸಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೈಲು ಸಂಖ್ಯೆ 20651 ಕೆಎಸ್ಆರ್ ಬೆಂಗಳೂರು – ತಾಳಗುಪ್ಪ ಎಕ್ಸ್’ಪ್ರೆಸ್ ರೈಲು, ಕುಂಸಿಗೆ 20:05 ಕ್ಕೆ ಬಂದು 20:06 ಕ್ಕೆ ಹೊರಡುತ್ತದೆ. ಹಾಗೆಯೇ ಅರಸಾಳುವಿಗೆ 20:20 ಕ್ಕೆ ಬಂದು 20:21 ಗಂಟೆಗೆ ಹೊರಡಲಿದೆ.
ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಅರಸಾಳುವಿಗೆ 06:19 ಕ್ಕೆ ಆಗಮಿಸಿ, 06:20 ಗಂಟೆಗೆ ಹೊರಡಲಿದೆ. ಮತ್ತು ಕುಂಸಿಗೆ 06:33 ಕ್ಕೆ ಬಂದು 06:34 ಗಂಟೆಗೆ ಹೊರಡಲಿದೆ.
Shivamogga, October 5: For the convenience of passengers, South Western Railway will continue the experimental temporary halting of some trains at Arasalu and Kumsi stations for a period of three months from October 6 to January 5, 2026.

