Shivamogga : Relatives quarrel – two stabbed! ಶಿವಮೊಗ್ಗ : ಸಂಬಂಧಿಗಳ ಜಗಳ – ಇಬ್ಬರಿಗೆ ಚೂರಿಯಿಂದ ಇರಿತ!

shimoga crime news | ಶಿವಮೊಗ್ಗ : ಸಂಬಂಧಿಗಳ ಜಗಳ – ಇಬ್ಬರಿಗೆ ಚೂರಿಯಿಂದ ಇರಿತ!

ಶಿವಮೊಗ್ಗ (shivamogga), ಸೆಪ್ಟೆಂಬರ್ 5: ಸಂಬಂಧಿಗಳ ನಡುವೆ ಏರ್ಪಟ್ಟ ಜಗಳದ ವೇಳೆ, ಇಬ್ಬರು ಚೂರಿಯಿಂದ ಇರಿತಕ್ಕೊಳಗಾದ ಘಟನೆ, ಶಿವಮೊಗ್ಗ ನಗರದ ಊರುಗಡೂರಿನಲ್ಲಿ ಅಕ್ಟೋಬರ್ 5 ರಂದು ನಡೆದಿದೆ.

ಶಬ್ಬೀರ್ ಹಾಗೂ ಶಹಬಾಜ್ ಚೂರಿ ಇರಿತಕ್ಕೊಳಗಾದವರೆಂದು ಗುರುತಿಸಲಾಗಿದ್ದು, ಇಬ್ಬರು ಸಹೋದರರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿ ಫರ್ದಿನ್ ಎಂಬಾತ, ಚೂರಿ ಇರಿತಕ್ಕೊಳಗಾದ ಸಹೋದರರ ತಂಗಿಯನ್ನು ಪ್ರೇಮ ವಿವಾಹವಾಗಿದ್ದ. ಮದುವೆಯಾದ ಒಂದು ವರ್ಷದ ಅಂತರದಲ್ಲಿಯೇ, ಆರೋಪಿಯು ಪತ್ನಿಯನ್ನು ತೊರೆದಿದ್ದ.

ಇದೇ ವಿಚಾರದಲ್ಲಿ ಶಬ್ಬೀರ್ ಹಾಗೂ ಶಹಬಾಜ್ ರವರು, ಫರ್ದಿನ್ ನನ್ನು ಬೆದರಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಫರ್ದಿನ್, ಇತರೆ ಇಬ್ಬರೊಂದಿಗೆ ಸೇರಿಕೊಂಡು ಶಬ್ಬೀರ್ ಹಾಗೂ ಶಹಬಾಜ್ ಮೇಲೆ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga, September 5: An incident occurred on October 5 in Orugadur, Shivamogga city, in which two people were stabbed during a fight between relatives.

Shivamogga: Train halts at Arasalu and Kumsi stations to continue ಶಿವಮೊಗ್ಗ : ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮುಂದುವರಿಕೆ Previous post shimoga railway news | ಶಿವಮೊಗ್ಗ : ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮುಂದುವರಿಕೆ
'BJP members who missed the GBA meeting are opponents of Bengaluru's development' - CM Siddaramaiah criticizes ‘ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳು’ - ಸಿಎಂ ಸಿದ್ದರಾಮಯ್ಯ ಟೀಕೆ Next post cm siddaramaiah in koppal | ಪ್ರತ್ಯೇಕ ಲಿಂಗಾಯಿತ ಧರ್ಮ ಚರ್ಚೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?