
shimoga | ಶಿವಮೊಗ್ಗ | ಪಾಲಿಕೆ ವಿದ್ಯುತ್ ವಿಭಾಗದ ಎಂಜಿನಿಯರ್ ಗಳ ಭೇಟಿ : ಸಾರ್ವಜನಿಕರ ಅಹವಾಲು ಆಲಿಕೆ
ಶಿವಮೊಗ್ಗ (shivamogga), ಅಕ್ಟೋಬರ್ 18: ಶಿವಮೊಗ್ಗ ಮಹಾನಗರ ಪಾಲಿಕೆ 1 ನೇ ವಾರ್ಡ್ ನ ಎಂಎಸ್’ಕೆ ಲೇಔಟ್, ಕರ್ನಾಟಕ ಗೃಹ ಮಂಡಳಿ ಬಡಾವಣೆಗಳಿಗೆ ಮಹಾನಗರ ಪಾಲಿಕೆ ಎಲೆಕ್ಟ್ರಿಕಲ್ ವಿಭಾಗದ ಎಂಜಿನಿಯರ್ ಗಳ ತಂಡ ಅಕ್ಟೋಬರ್ 16 ರ ಸಂಜೆ ಭೇಟಿಯಿತ್ತು ಸಾರ್ವಜನಿಕರ ಅಹವಾಲು ಆಲಿಸಿತು.
ಪಾಲಿಕೆ ಎಲೆಕ್ಟ್ರಿಕಲ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ತೇಜುಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್ ಮತ್ತವರ ಸಿಬ್ಬಂದಿಗಳು ಭೇಟಿಯ ವೇಳೆ ಉಪಸ್ಥಿತರಿದ್ದರು. ಈ ವೇಳೆ ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘವು ಬೇಡಿಕೆಗಳ ಮನವಿ ಪತ್ರ ಅರ್ಪಿಸಿತು.
ಸೋಮಿನಕೊಪ್ಪ – ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಡುವಿನ ರಾಜ್ಯ ಹೆದ್ದಾರಿಯ ಹಲವೆಡೆ ವಿದ್ಯುತ್ ಕಂಬಗಳಲ್ಲಿ ಬೀದಿ ದೀಪಗಳ ಅಳವಡಿಕೆ ಮಾಡಿಲ್ಲ. ಇದರಿಂದ ಸಂಜೆ ವೇಳೆ ಹೆದ್ದಾರಿಯಲ್ಲಿ ಕತ್ತಲು ಆವರಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು.
ಎಂ ಎಸ್ ಕೆ ಲೇಔಟ್ ನಲ್ಲಿ ಹೈಮಾಸ್ಟ್ ಹಾಗೂ ಹೊಸ ಬೀದಿ ದೀಪಗಳ ಅಳವಡಿಸಬೇಕು. ಪ್ರೆಸ್ ಕಾಲೋನಿ ಮುಖ್ಯ ರಸ್ತೆಯಲ್ಲಿ ಹೈಮಾಸ್ಟ್ – ಬೀದಿ ದೀಪಗಳ ಅಳವಡಿಕೆ, ಸಿಸಿಎಂಸ್ ಮೂಲಕ ಬೀದಿ ದೀಪಗಳ ನಿರ್ವಹಣೆ, ಉದ್ಯಾನವನಗಳಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ಸಂಘಟನೆ ಮನವಿ ಮಾಡಿತು.
ಮನವಿ ಸ್ವೀಕರಿಸಿದ ನಂತರ ಕಾರ್ಯಪಾಲಕ ಅಭಿಯಂತರ ತೇಜುಪ್ರಸಾದ್ ಅವರು ಮಾತನಾಡಿ, ಸಮಸ್ಯೆಗಳ ಪರಿಹಾರದ ಕುರಿತಂತೆ ಆಯುಕ್ತರ ಜೊತೆ ಚರ್ಚಿಸಿ ಕಾಲಮಿತಿಯೊಳಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರ, ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಸಂಘದ ಮುಖಂಡರಾದ ಗುರುಚರಣ್, ಕೊಟ್ರೇಶಪ್ಪ, ಶಿಕ್ಷಕರಾದ ಅಶೋಕ್ ಕುಮಾರ್, ಕೃಷ್ಣಮೂರ್ತಿ, ನಾಗಭೂಷಣ್ ಸೇರಿದಂತೆ ಮೊದಲಾದವರಿದ್ದರು.
Shivamogga, October 18: A team of engineers from the electrical department of the Shivamogga Municipal Corporation visited MSK Layout and Karnataka Housing Board Layouts of Ward 1 of the Shivamogga Municipal Corporation on the evening of October 16 and listened to the concerns of the public.