Shivamogga - Bhadravati rail route review: Alternative route for vehicular traffic ಶಿವಮೊಗ್ಗ - ಭದ್ರಾವತಿ ರೈಲು ಮಾರ್ಗ ಪರೀಶೀಲನೆ : ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

shimoga railway news | ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರೀಶೀಲನೆ : ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

ಶಿವಮೊಗ್ಗ (shivamogga), ಅಕ್ಟೋಬರ್ 18 : ಶಿವಮೊಗ್ಗ – ಭದ್ರಾವತಿ ನಡುವಿನ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್ ಸಿ) ನಂಬರ್ : 35, 38 ಮತ್ತು 38/ಎ ಗಳನ್ನು, ಅಕ್ಟೋಬರ್ 19 ರಿಂದ ಅಕ್ಟೋಬರ್ 25 ರವರೆಗೆ ವಿವಿಧ ದಿನಗಳಂದು ಮುಚ್ಚಲಾಗುತ್ತಿದೆ. ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶಿಸಿದ್ದಾರೆ.

ಎಲ್‌ಸಿ 35 – ಲಕ್ಷ್ಮೀಪುರ ರಸ್ತೆಯು ಅ. 19 ರ ಬೆಳಿಗ್ಗೆ 8 ರಿಂದ ಅ. 20 ರ ಸಂಜೆ 6 ರವರೆಗೆ ಬಿ .ಹೆಚ್. ರಸ್ತೆ ಮುಖಾಂತರ, ಕಡದಕಟ್ಟೆ- ಹೆಬ್ಬಂಡಿ ರಸ್ತೆ ಸಂಪರ್ಕ – ಲಕ್ಷ್ಮೀಪುರ ರಸ್ತೆ ಮಾರ್ಗ.

ಎಲ್‌ ಸಿ 38 – ನವುಲೆ ಬಸವಾಪುರ ರಸ್ತೆ. ಅ. 22 ರ ಬೆಳಿಗ್ಗೆ 8 ರಿಂದ ಅ. 23 ರ ಸಂಜೆ 6 ರವರೆಗೆ ಎಲ್.ಸಿ. ನಂಬರ್ 35 ರ ಮೂಲಕ ಮಜ್ಜಿಗೇನಹಳ್ಳಿ- ನವುಲೆ ಬಸವಾಪುರ ಸಂಪರ್ಕ ರಸ್ತೆ ಮಾರ್ಗ.

ಎಲ್‌ ಸಿ 38/ಎ – ಹೊನ್ನವಿಲೆ ರಸ್ತೆ – ಅ. 34 ರ ಬೆಳಿಗ್ಗೆ 8 ರಿಂದ ಅ 25ರ ಸಂಜೆ 6 ರವರೆಗೆ ಎಲ್ ಸಿ 38 ರ ಮೂಲಕ ನವುಲೆ ಬಸವಾಪುರ ರಸ್ತೆ – ಹೊನ್ನವಿಲೆ ರಸ್ತೆ ಮಾರ್ಗ.

ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಅಯಾ ದಿನಾಂಕಗಳಂದು ಮಾತ್ರ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.

Shivamogga, October 18: Railway Level Crossing (LC) No. 35, 38 and 38/A between Shivamogga – Bhadravati will be closed on various days from October 19 to October 25.

Shivamogga: Waste disposal at the bottom of the flyover – Citizens outraged! ಶಿವಮೊಗ್ಗ : ಫ್ಲೈ ಓವರ್ ಕೆಳಭಾಗದಲ್ಲಿಯೇ ತ್ಯಾಜ್ಯ ವಿಲೇವಾರಿ – ನಾಗರೀಕರ ಆಕ್ರೋಶ! Previous post shimoga news | ಶಿವಮೊಗ್ಗದ ಕಾಶೀಪುರ ಫ್ಲೈ ಓವರ್ ಬಳಿ ಘನತ್ಯಾಜ್ಯದ ರಾಶಿ – ನಾಗರೀಕರ ಆಕ್ರೋಶ!
Children under 18 years of age banned from fireworks shops in Shivamogga district! ಶಿವಮೊಗ್ಗ ಜಿಲ್ಲೆಯ ಪಟಾಕಿ ಮಾರಾಟ ಅಂಗಡಿಗಳಲ್ಲಿ 18 ವರ್ಷದೊಳಗಿನ ಮಕ್ಕಳ ಬಳಕೆ ನಿಷೇಧ Next post shimoga news | ಶಿವಮೊಗ್ಗ ಜಿಲ್ಲೆಯ ಪಟಾಕಿ ಮಾರಾಟ ಅಂಗಡಿಗಳಲ್ಲಿ 18 ವರ್ಷದೊಳಗಿನ ಮಕ್ಕಳ ಬಳಕೆ ನಿಷೇಧ!