Shivamogga: Encroached road - Residents of Durga Layout, Gadikoppa in a precarious situation! ಶಿವಮೊಗ್ಗ : ಒತ್ತುವರಿಯಾದ ರಸ್ತೆ – ಅತಂತ್ರ ಸ್ಥಿತಿಯಲ್ಲಿ ಗಾಡಿಕೊಪ್ಪದ ದುರ್ಗಾ ಲೇಔಟ್ ನಿವಾಸಿಗಳು!

shimoga news | ಶಿವಮೊಗ್ಗ : ಒತ್ತುವರಿಯಾದ ರಸ್ತೆ – ಅತಂತ್ರ ಸ್ಥಿತಿಯಲ್ಲಿ ಗಾಡಿಕೊಪ್ಪದ ದುರ್ಗಾ ಲೇಔಟ್ ನಿವಾಸಿಗಳು!

ಶಿವಮೊಗ್ಗ (shivamogga), ನವೆಂಬರ್ 1: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಗಾಡಿಕೊಪ್ಪದ ದುರ್ಗಾ ಲೇಔಟ್ ನ ಮುಖ್ಯ ರಸ್ತೆ ಒತ್ತುವರಿಯಾಗಿದೆ. ಇದರಿಂದ ಸ್ಥಳೀಯ ನಾಗರೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜನ – ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ!

ಮುಖ್ಯ ರಸ್ತೆಯ ಜಾಗವನ್ನು ಕೆಲವರು ಎಲ್ಲೆಂದರಲ್ಲಿ ಒತ್ತುವರಿ ಮಾಡಿಕೊಂಡು, ಕಟ್ಟಡಗಳ ನಿರ್ಮಾಣ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಖಾಸಗಿ ವ್ಯಕ್ತಿಯೋರ್ವರ ನಿವೇಶನದ ಮೂಲಕ, ನಿವಾಸಿಗಳು ವಾಹನಗಳನ್ನು ಕೊಂಡೊಯ್ಯುತ್ತಿದ್ದರು.

ಈ ನಡುವೆ ನವೆಂಬರ್ 1 ರಂದು ವಾಹನಗಳು ಸಂಚರಿಸುತ್ತಿದ್ದ ನಿವೇಶನದ ಬಳಿ ಮಣ್ಣು ಹಾಕಲಾಗಿದೆ. ಇದರಿಂದ ಬಡಾವಣೆ ರಸ್ತೆಯಲ್ಲಿ ಜನ – ವಾಹನ ಸಂಚಾರ ಬಂದ್ ಆಗಿದೆ. ಬೈಕ್ ಗಳು ಹಾಗೂ ಪಾದಚಾರಿಗಳು, ಬಡಾವಣೆಯ ಎರಡು ಮನೆಗಳ ನಡುವೆ ಬಿಟ್ಟಿರುವ 5 ಅಡಿ ಅಗಲದ ಸೆಟ್ ಬ್ಯಾಕ್ ಜಾಗದಲ್ಲಿ ಸಂಚರಿಸುತ್ತಿದ್ದಾರೆ.

ಉಳಿದಂತೆ ಕಾರು ಮತ್ತೀತರ ವಾಹನಗಳನ್ನು ಮನೆಯಿಂದ ಹೊರಕ್ಕೆ ಕೊಂಡೊಯ್ಯಲು ಆಗುತ್ತಿಲ್ಲ. ಹಾಗೆಯೇ ಸದ್ಯ ಮನೆಯಿಂದ ಹೊರ ತೆಗೆದುಕೊಂಡು ಹೋಗಿದ್ದ ಕಾರುಗಳನ್ನು ಮನೆಗೆ ತರಲು ಆಗುತ್ತಿಲ್ಲವಾಗಿದೆ ಎಂದು ಕೆಲ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಗಮನಹರಿಸಲಿ : ಲೇಔಟ್ ನ ಮೂಲ ನಕ್ಷೆಯಲ್ಲಿ ರಸ್ತೆ ಜಾಗದ ವಿವರವಿದೆ. ಆದರೆ ಕಾಲಾಂತರದಲ್ಲಿ ರಸ್ತೆ ಜಾಗ ಒತ್ತುವರಿಯಾಗಿ, ಇದೀಗ ರಸ್ತೆ ಬಂದ್ ಆಗುವ ಹಂತಕ್ಕೆ ಬಂದಿದೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ ಎಂದು ಕೆಲ ಸ್ಥಳೀಯ ನಿವಾಸಿಗಳು ದೂರುತ್ತಾರೆ.

ತಕ್ಷಣವೇ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಡಳಿತ ಇತ್ತ ಗಮನಹರಿಸಬೇಕಾಗಿದೆ. ದುರ್ಗಾ ಲೇಔಟ್ ನ ಮುಖ್ಯ ರಸ್ತೆಯಲ್ಲಿ ಜನ – ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಅಲ್ಲಿಯವರೆಗೂ ಈ ಹಿಂದಿನಂತೆ ತಾತ್ಕಾಲಿಕ ಕ್ರಮವಾಗಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ನಿವೇಶನದ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

*** ದುರ್ಗಾ ಲೇಔಟ್ ಗೆ 24*7 ವ್ಯವಸ್ಥೆಯಡಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಹಲವು ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಕಾರಣದಿಂದ ಸಾವಿರಾರು ರೂ. ತೆತ್ತು ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಖರೀದಿಸುವಂತಾಗಿದೆ. ಈಗಾಗಲೇ ಈ ಕುರಿತಂತೆ ಹಲವು ಬಾರಿ ಜಲ ಮಂಡಳಿ ಆಡಳಿತದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇನ್ನಾದರೂ ಜಲ ಮಂಡಳಿ ಆಡಳಿತ ಬಡಾವಣೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ದುರ್ಗಾ ಲೇಔಟ್ ನ ಕೆಲ ನಿವಾಸಿಗಳು ಒತ್ತಾಯಿಸುತ್ತಾರೆ.

Shivamogga, November 1: The main road of Durga Layout, Gadikoppa, Ward 5, under the jurisdiction of Shivamogga Municipal Corporation, has been encroached upon. This is causing hardship to the local citizens. It is affecting the movement of people and vehicles!

Bhadravati: Caste abuse and assault case – four sentenced to prison! ಭದ್ರಾವತಿ : ಖಾರದ ಪುಡಿ ಎರಚಿ ಹಲ್ಲೆ ಪ್ರಕರಣ – ನಾಲ್ವರಿಗೆ ಜೈಲು ಶಿಕ್ಷೆ! Previous post bhadravati court news | ಭದ್ರಾವತಿ | ಖಾರದ ಪುಡಿ ಎರಚಿ ಹಲ್ಲೆ ಪ್ರಕರಣ – ನಾಲ್ವರಿಗೆ ಜೈಲು ಶಿಕ್ಷೆ!