shimoga | ಶಬರಿಮಲೈ ಅಯ್ಯಪ್ಪ ಸ್ವಾಮಿ ಯಾತ್ರಿಕರಿಗೆ ಆರೋಗ್ಯ ಇಲಾಖೆ ಸಲಹೆಯೇನು? ಮಿದುಳು ತಿನ್ನುವ ಅಮೀಬಾ ಬಗ್ಗೆ ನೀಡಿದ ಎಚ್ಚರಿಕೆಯೇನು?
ಶಿವಮೊಗ್ಗ (shivamogga), ನವೆಂಬರ್ 20 : ಶಿವಮೊಗ್ಗ ಜಿಲ್ಲೆಯಿಂದ ಕೇರಳ ರಾಜ್ಯದ ಶಬರಿಮಲೈಗೆ ತೆರಳುವ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ (ನೇಗ್ಲೇರಿಯಾ ಫೌಲೇರಿ) ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ನೇಗ್ಲೇರಿಯಾ ಫೌಲೇರಿ (Naegleria Fowleri) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆ:- ನಿಂತ ನೀರು, ಕೊಳ/ಈಜುಕೊಳಗಳು ಹಾಗೂ ಕೆರೆ.
ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ. ನೇಗ್ಲೇರಿಯಾ ಫೌಲೇರಿ (Naegleria Fowleri) ಅತ್ಯಂತ ವಿಷಕಾರಿ (Virulent) ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (Amoebic Meningoencephalitis) ಎನ್ನುವ ಅಪರೂಪದ ಗಂಭೀರ/ಮಾರಣಾಂತಿಕ ಕಾಯಿಲೆಯನ್ನು ಉಂಟುಮಾಡುತ್ತದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು, ಮುನ್ನಚ್ಚರಿಕೆ ವಹಿಸುವುದು,
ನೀರಿನ ಸಂಪರ್ಕದ 7 ದಿನಗಳೊಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ/ವಾಂತಿ, ಕುತ್ತಿಗೆ ಬಿಗಿತ. ಗೊಂದಲ/ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ (Behavioural disorders) ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೇ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
Shivamogga, Nov. 20: The Health Department has advised pilgrims traveling from Shivamogga district to Sabarimala in Kerala to take precautions against the brain-eating amoeba (Naegleria fowleri). Naegleria fowleri is a free-living amoeba that is found mainly in warm freshwater and soil. Examples: – standing water, ponds/swimming pools and lakes.
