shimoga news | ಶಿವಮೊಗ್ಗ : ಖ್ಯಾತ ವೈದ್ಯೆ ಮತ್ತವರ ಪುತ್ರ ಆತ್ಮಹತ್ಯೆಗೆ ಶರಣು!

Shivamogga : Renowned doctor and his son commit suicide! ಶಿವಮೊಗ್ಗ : ಖ್ಯಾತ ವೈದ್ಯೆ ಮತ್ತವರ ಪುತ್ರ ಆತ್ಮಹತ್ಯೆಗೆ ಶರಣು!

ಶಿವಮೊಗ್ಗ (shivamogga), ನವೆಂಬರ್ 30: ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ತಾಯಿ ಹಾಗೂ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ, ಶಿವಮೊಗ್ಗ ನಗರದ ಅಶ್ವಥ ನಗರ 5 ನೇ ತಿರುವಿನಲ್ಲಿ ನಡೆದಿದ್ದು, ಡಿಸೆಂಬರ್ 5 ರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ನಗರದ ಹೊಮ್ಮರಡಿ ಖಾಸಗಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಜಯಶ್ರೀ (55) ಹಾಗೂ ಅವರ ಪುತ್ರ ಆಕಾಶ್ (35) ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸಲಾಗಿದೆ.

ಮನೆಯ ಕೆಳಭಾಗದಲ್ಲಿ ಜಯಶ್ರೀರವರು ಹಾಗೂ ಮೊದಲ ಮಹಡಿಯಲ್ಲಿ ಆಕಾಶ್ ರವರು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜಯಶ್ರೀ ಅವರ ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕಳೆದ ಒಂದೂವರೆ ವರ್ಷದ ಹಿಂದೆ ಆಕಾಶ್ ಅವರ ಪತ್ನಿ, ಇದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಮೇ ತಿಂಗಳಲ್ಲಿ ಆಕಾಶ್ ರವರಿಗೆ ಮತ್ತೊಂದು ವಿವಾಹವಾಗಿತ್ತು.

ಕೆಲ ಕೌಟಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ, ತಾಯಿ – ಮಗನ ನಡುವೆ ರಾತ್ರಿ ಗಲಾಟೆಯಾಗಿದೆ. ಇದೇ ಇಬ್ಬರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ವೇಳೆ ಆಕಾಶ್ ಅವರ ಪತ್ನಿ ಮನೆಯಲ್ಲಿಯೇ ಇದ್ದು, ಬೇರೆ ಕೊಠಡಿಯಲ್ಲಿ ಮಲಗಿದ್ದರು. ಅವರು ಬೆಳಿಗ್ಗೆ ಕೊಠಡಿಯಿಂದ ಹೊರಬಂದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ, ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

Shivamogga, November 30: The incident of a mother and son committing suicide by hanging themselves in separate rooms of their house took place at the 5th turn of Ashwath Nagar in Shivamogga city. The incident came to light on the morning of December 5.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →