shimoga news | ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ  ಆರ್. ಮೋಹನ್ ಕುಮಾರ್ ಮನವಿ

Appeal by Government Employees’ Association President R. Mohan Kumar to Apply for the Best Service Award ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಆರ್ ಮೋಹನ್ ಕುಮಾರ್ ಮನವಿ

ಶಿವಮೊಗ್ಗ (shivamogga), ಫೆಬ್ರವರಿ 06: ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ  2026 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ರಾಜ್ಯ ಸರ್ಕಾರಿ ನೌಕರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಆರ್ ಮೋಹನ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಫೆಬ್ರವರಿ 6 ರಂದು ಬಿಡುಗಡೆ ಮಾಡಿರುವ ಪ್ರಟಕಣೆಯಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಅರ್ಹ ಅಧಿಕಾರಿ – ನೌಕರರು ತಮ್ಮ ನಾಮನಿರ್ದೇಶನಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಮಟ್ಟಕ್ಕೆ 30 ಪ್ರಶಸ್ತಿ ಹಾಗೂ ಶಿವಮೊಗ್ಗ ಜಿಲ್ಲೆಗೆ 10 ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಾಜ್ಯ ಮಟ್ಟದ ಪ್ರಶಸ್ತಿ ತಲಾ 50 ಸಾವಿರ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ತಲಾ 20 ಸಾವಿರ ನಗದು ಬಹುಮಾನ ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಮತ್ತು ರಾಜ್ಯ ಮಟ್ಟದ ಎರಡೂ ಹಂತದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಧಿಕಾರಿ – ನೌಕರರು, ಪ್ರತ್ಯೇಕ ನಾಮನಿರ್ದೇಶನ ಸಲ್ಲಿಸಬೇಕು. ಕನಿಷ್ಠ 03 ವರ್ಷಗಳ ಸೇವಾವಧಿಯನ್ನು ಪೂರೈಸಿರಬೇಕು ಎಂದು ಹೇಳಿದ್ಧಾರೆ.

ಕನ್ನಡ ಹಾಗೂ ಆಂಗ್ಲ ಎರಡೂ ಭಾಷೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಕನ್ನಡದಲ್ಲಿ ಸಲ್ಲಿಸುವವರು ನುಡಿ 6.0 ಆವೃತ್ತಿಯನ್ನು ಮಾತ್ರ ಬಳಸಬೇಕು. ಆಸಕ್ತರು ತಮ್ಮ ಪ್ರಸ್ತಾವನೆಯನ್ನು kttps://dparkarnataka.gov.in, kttps://sarvothamaavards.karnataka.gov.in ಮುಖಾಂತರ ಫೆಬ್ರವರಿ 25ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Appeal by Government Employees’ Association President R. Mohan Kumar to Apply for the Best Service Award

Shivamogga, February 06: Applications have been invited from state government employees for the 2026 Best Service Award at both the state and Shivamogga district levels, according to R. Mohan Kumar, President of the Shivamogga District Unit of the Government Employees’ Association.

In a press release issued on February 6, he informed that eligible officers and employees of the state government can submit their nominations online.

  • Awards:
    • State level: 30 awards, each carrying a cash prize of ₹50,000.
    • District level (Shivamogga): 10 awards, each carrying a cash prize of ₹20,000.

Employees wishing to apply for both state and district level awards must submit separate nominations. A minimum of three years of service is required to be eligible.

Applications can be submitted in both Kannada and English. Those applying in Kannada must use Nudi 6.0 version.

Interested candidates should submit their proposals by February 25 through the following websites:

  • dparkarnataka.gov.in (dparkarnataka.gov.in in Bing)
  • sarvothamaavards.karnataka.gov.in (sarvothamaavards.karnataka.gov.in in Bing)

This information was shared in the press release by District President R. Mohan Kumar.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →