shimoga news | ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ – ಶಾಸಕರ ಸೂಚನೆಯೇನು?

Disruption in Drinking Water Supply in Shivamogga – MLA’s Instructions ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ – ಶಾಸಕರ ಸೂಚನೆಯೇನು?

ಶಿವಮೊಗ್ಗ, ಏಪ್ರಿಲ್ 04: ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು. ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಜಲ ಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

NES Advertisment
NES Advertisment

ಕುಡಿಯುವ ನೀರು ಪೂರೈಕೆಯಲ್ಲಿನ ವ್ಯತ್ಯಯದ ದೂರುಗಳ ಹಿನ್ನೆಲೆಯಲ್ಲಿ ಏಪ್ರಿಲ್ 04 ರಂದು ಶಾಸಕರು ನಗರದ ಮಂಡ್ಲಿಯಲ್ಲಿರುವ ಕುಡಿಯುವ ನೀರು ಶುದ್ದೀಕರಣ ಘಟಕಕ್ಕೆ ಭೇಟಿಯಿತ್ತು ಖುದ್ದು ಪರಿಶೀಲನೆ ನಡೆಸಿದರು.

ನಗರದ ಜನತೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಸಮಸ್ಯೆ ಪರಿಹರಿಸಬೇಕು ಎಂದು ಶಾಸಕರು ಸೂಚಿಸಿದ್ದಾರೆ.

ಶಾಸಕರ ಸೂಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಲ ಮಂಡಳಿ ಅಧಿಕಾರಿಗಳು, ‘ಮುಂದಿನ ಎರಡು ದಿನಗಳಲ್ಲಿ ನೀರು ಸರಬರಾಜಿನಲ್ಲಿ ಉಂಟಾಗಿರುವ ಎಲ್ಲ ರೀತಿಯ ತಾಂತ್ರಿಕ ಅಡಚಣೆ ಪರಿಹರಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಜಲ ಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Disruption in Drinking Water Supply in Shivamogga – MLA’s Instructions

Shivamogga, April 04: Shivamogga city’s daily drinking water supply must not face any disruption. Shivamogga constituency MLA S. N. Channabasappa has issued strict instructions to water board officials to ensure proper supply of drinking water.

Following complaints about interruptions in water supply, on April 04 the MLA visited the city’s drinking water purification plant located at Mandli and personally inspected the situation.

He directed officials to remain on-site and resolve issues immediately, emphasizing that there should be no disruption in drinking water supply to the citizens.

Responding positively to the MLA’s instructions, water board officials assured: “Within the next two days, all technical obstacles causing interruptions in water supply will be resolved, and proper supply will be ensured.”

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *