shimoga news | ಶಿವಮೊಗ್ಗ : ವಿನೋಬನಗರ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಕಲ್ಯಾಣ ಮಂಟದಲ್ಲಿ ಚಿನ್ನಾಭರಣ ಕಳವು ಆರೋಪಿಗಳು ಪತ್ತೆ!

Shivamogga : Vinobanagar police in quick action - gold jewellery theft suspects found in Kalyan Mantapa! ಶಿವಮೊಗ್ಗ : ವಿನೋಬನಗರ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ - ಕಲ್ಯಾಣ ಮಂಟದಲ್ಲಿ ಚಿನ್ನಾಭರಣ ಕಳವು ಆರೋಪಿಗಳು ಪತ್ತೆ!

ಶಿವಮೊಗ್ಗ (shivamogga), ಮೇ 03: ಅತಿಥಿಗಳ ಸೋಗಿನಲ್ಲಿ ಆಗಮಿಸಿ ಕಲ್ಯಾಣ ಮಂಟಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದ ಆರೋಪದ ಮೇರೆಗೆ, ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ ಮೂವರನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಶರಾವತಿ ನಗರ ಆಟೋ ಕಾಂಪ್ಲೆಕ್ಸ್ ನಿವಾಸಿ ಅಮ್ಜದ್ ಖಾನ್ ಯಾನೆ ಅಂಜು (29) ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನವರು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಮುಖ್ಯ ಆರೋಪಿಯಿಂದ 3.75 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ್ದ 2,10,000 ರೂ. ಮೌಲ್ಯದ 02 ಬೈಕ್‌ ಗಳು ಸೇರಿದಂತೆ ಒಟ್ಟಾರೆ 5,85,೦೦೦ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆ ಸರ್ಕಲ್ ಇನ್ಸ್’ಪೆಕ್ಟರ್ (ಪ್ರಭಾರ) ಸುರೇಶ್ ರವರ ಉಸ್ತುವಾರಿಯಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ತಿರುಮಲೇಶ್ ಮತ್ತವರ ಸಿಬ್ಬಂದಿಗಳಾದ ರಾಜು ಕೆ ಆರ್, ಚಂದ್ರಾನಾಯ್ಕ್ ಬಿ, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎನ್, ಮನುಶಂಕರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : 30/04/2026 ರಂದು ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವುಲೆ ಸರ್ಜಿ ಕನ್ವೆಷನ್ ಹಾಲ್ ನಲ್ಲಿ ಮದುವೆ ಸಮಾರಂಭವೊಂದು ಆಯೋಜಿತವಾಗಿತ್ತು. ರೂಮ್ ಗಳ ಬ್ಯಾಗ್ ನಲ್ಲಿಟ್ಟಿದ್ದ ಒಟ್ಟು 28 ಗ್ರಾಂ ತೂಕದ ಬಂಗಾರದ ಆಭರಣಗಳು ಕಳುವಾಗಿದ್ದವು.

ಈ ಸಂಬಂಧ ತೇವರ ಚಟ್ನಹಳ್ಳಿ ಗ್ರಾಮದ ನಿವಾಸಿ ಸದಾಶಿವಪ್ಪ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ದಾಖಲಾದ ಕೆಲ ಗಂಟೆಗಳಲ್ಲಿಯೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

Shivamogga : Vinobanagar police in quick action – gold jewellery theft suspects found in Kalyan Mantapa!

Shivamogga, May 03: Vinobanagar police arrested three people, including two minors, on charges of stealing gold jewellery worth lakhs of rupees from Kalyan Mantapa and fleeing.

Amjad Khan alias Anju (29), a resident of Sharavathi Nagar Auto Complex in Shivamogga, and two minors have been identified as the arrested accused.

From the main accused, 24 grams of gold jewellery worth Rs 3.75 lakh, 02 bikes worth Rs 2,10,000 used in the crime, including a total of Rs 5,85,000 worth of items, have been seized.

Under the guidance of DySP Sanjeev Kumar, Circle Inspector (in-charge) Suresh of Vinobanagar Police Station, Circle Inspector Thirumalesh and his staff Raju KR, Chandranaik B, Mallappa SG, Arun Kumar N, Manushankar have succeeded in arresting the accused.

Background of the case: On 30/04/2026, a wedding ceremony was organized at Navule Sarji Convention Hall under Vinobanagar Police Station limits, Shivamogga. Gold ornaments weighing a total of 28 grams kept in the room bags were stolen.

A complaint was filed by Sadashivappa, a resident of Chatnahalli village, Thevar, to the police in this regard. The police were successful in identifying the accused within a few hours of the case being registered.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *