ತೀರ್ಥಹಳ್ಳಿ (thirthahalli), ಮೇ 21: ಪತಿ ಮನೆಯಿಂದ ತವರು ಮನೆಗೆಂದು ತೆರಳಿದ ಮಹಿಳೆಯೋರ್ವರು, ತನ್ನಿಬ್ಬರು ಮಕ್ಕಳೊಂದಿಗೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
17 ನೇ ಮೈಲಿಕಲ್ಲು ಸಮೀಪದ ಕಣಗಲಕೊಪ್ಪ ಗ್ರಾಮ ನಿವಾಸಿಯಾದ ಅನಿಲ್ ಕುಮಾರ್ ಎಂಬುವವರ ಪತ್ನಿ ಸುಮಾ ಕೆ ಎಸ್ (32), ಪುತ್ರ ಜಯಂತ್ (14) ಹಾಗೂ ಪುತ್ರಿ ವಿಸ್ಮಿತ (12) ನಾಪತ್ತೆಯಾದವರೆಂದು ಗುರುತಿಸಲಾಗಿದೆ.
ಮೇ 13 ರಂದು ಮಹಿಳೆಯು ತನ್ನಿಬ್ಬರು ಮಕ್ಕಳೊಂದಿಗೆ ತವರು ಮನೆಗೆಂದು ತೆರಳಿದ್ದರು. ನಂತರ ತವರು ಮನೆಗೆ ಅವರು ಹೋಗಿರಲಿಲ್ಲ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆ ಮೇ 21 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ನಾಪತ್ತೆಯಾದವರ ಚಹರೆ ಈ ಕೆಳಕಂಡಂತಿದೆ.
ಸುಮಾ ಕೆ.ಎಸ್. : 32 ವರ್ಷ, 5.0 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಜಯಂತ್: 14 ವರ್ಷ, 04 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೌಕಳಿ ಶರ್ವ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ವಿಸ್ಮಿತ: 12 ವರ್ಷ, 04 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಈ ಮೂವರ ಕುರಿತಂತೆ ಸುಳಿವು ಲಭ್ಯವಾದಲ್ಲಿ ಮಾಳೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08181-235142/228310/08182-261413/9480803353/9480803333/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Thirthahalli: Mother mysteriously disappears with two children!
Thirthahalli, May 21: An incident has taken place under the jurisdiction of Malur police station in Thirthahalli taluk of Shivamogga district, where a woman, who had gone to her hometown from her husband’s house, mysteriously disappeared with her two children.
The missing persons are Suma K.S. (32), son Jayant (14) and daughter Vismita (12), wife of Anil Kumar, a resident of Kanagalakoppa village near the 17th milestone.
On May 13, the woman had gone to her hometown with her two children. She did not return to her hometown after that. The police department said in a statement issued on May 21 that there is no trace of her anywhere. The faces of the missing persons are as follows.
Suma K.S. : 32 years old, 5.0 feet tall, chubby face, solid build, white complexion. He wears a blue chudidar when leaving home.
Jayant: 14 years old, 04 feet tall, chubby face, average build, wheat complexion. He wears a blue and white square collar shirt, blue jeans when leaving home.
Vismita: 12 years old, 04 feet tall, chubby face, average build, white complexion. He wears a blue chudidar when leaving home.
If you have any information about these three people, please contact Malur Police Station on the following numbers: 08181-235142/228310/08182-261413/9480803353/9480803333/9480803300, the police statement said.

