ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 22: ಪ್ರಸ್ತುತ ವರ್ಷದ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಆಯ್ದ ನಗರ-ಪಟ್ಟಣ ಪ್ರದೇಶಗಳಲ್ಲಿ, ‘ಮಿಯಾವಾಕಿ’ ಪದ್ದತಿಯಡಿ ಕಿರು ಅರಣ್ಯ ಬೆಳೆಸುವ ಯೋಜನೆ ಘೋಷಿಸಲಾಗಿದೆ. ಬಜೆಟ್ ಘೋಷಣೆ ಅನುಷ್ಠಾನಕ್ಕೆ ಪೌರಾಡಳಿತ ನಿರ್ದೇಶನಾಲಯ ಮುಂದಾಗಿದೆ.
ಈ ಸಂಬಂಧ 100 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ‘ಮಿಯಾವಾಕಿ ಪಾರ್ಕ್’ ಗಳ ಅಭಿವೃದ್ದಿಗೆ ಕ್ರಮಕೈಗೊಂಡಿದೆ. ಇದರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಭದ್ರಾವತಿ ನಗರಸಭೆ, ಸಾಗರ ನಗರಸಭೆ ಹಾಗೂ ಸೊರಬ ಪಟ್ಟಣ ಪಂಚಾಯ್ತಿ ಆಯ್ಕೆಯಾಗಿವೆ.
ಈ ಯೋಜನೆಯ ಅನುಷ್ಠಾನಕ್ಕೆ 8 ರಿಂದ 12 ಲಕ್ಷ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಆಯಾ ಸ್ಥಳೀಯ ಸಂಸ್ಥೆಗಳ ಹಂತದಲ್ಲಿಯೇ ಟೆಂಡರ್ ಆಹ್ವಾನಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳ ಸ್ವಂತ ನಿಧಿ, 15 ಮತ್ತು 16 ನೇ ಹಣಕಾಸು ಆಯೋಗದ ಅನುದಾನ, ಸಿಎಸ್ಆರ್ ಅನುದಾನ ಬಳಸಿಕೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸರ್ಕಾರಿ ಜಾಗಗಳು, ಕೆರೆ ಪ್ರದೇಶದ ಬಫರ್ ವಲಯ, ರಸ್ತೆ ಬದಿಯ ಬಫರ್ ವಲಯಗಳು, ಉದ್ಯಾನಗಳಲ್ಲಿ ಕನಿಷ್ಠ 100 ಚದರ ಮೀಟರ್ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಮಿಯಾವಾಕಿ ಪಾರ್ಕ್ ಗಳನ್ನು ಅಭಿವೃದ್ದಿಗೊಳಿಸಬೇಕು ಎಂದು ಸೂಚಿಸಲಾಗಿದೆ.
ಮೊದಲೇ ಸಿದ್ದತೆ : ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ನಗರ ವ್ಯಾಪ್ತಿಯ ಉದ್ಯಾನವನವೊಂದರಲ್ಲಿ ‘ಮಿಯಾವಾಕಿ’ ಪದ್ದತಿಯಡಿ ಕಿರು ಅರಣ್ಯ ಬೆಳೆಸುವ ಚಿಂತನೆಯನ್ನು ಈ ಮೊದಲೇ ನಡೆಸಿತ್ತು. ಕಳೆದ ಕೆಲ ತಿಂಗಳ ಹಿಂದೆಯೇ ಪಾಲಿಕೆ ಆಯುಕ್ತ ಮಾಯಣ್ಣಗೌಡರವರು ಸದರಿ ಯೋಜನೆಯ ನೀಲನಕ್ಷೆಯೊಂದನ್ನು ಸಿದ್ದಪಡಿಸಿದ್ದರು.
ಅಗತ್ಯವಿದೆ ಯೋಜನೆ : ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ‘ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗದಲ್ಲಿ, ಪ್ರಾಕೃತಿಕ ಸಂಪತ್ತಿನ ವಿನಾಶವೂ ಕೂಡ ಏರುಗತಿಯಲ್ಲಿದೆ. ನಗರ ವ್ಯಾಪ್ತಿಯಲ್ಲಿ ಮರಗಿಡಗಳು, ಕೆರೆಕಟ್ಟೆಗಳು, ಕೃಷಿ ಭೂಮಿಗಳು ಕಣ್ಮರೆಯಾಗುತ್ತಿವೆ!
ಇದರಿಂದ ಶಿವಮೊಗ್ಗ ನಗರದ ಪ್ರಾಕೃತಿಕ ವ್ಯವಸ್ಥೆ ಏರುಪೇರಾಗುವಂತಾಗಿದೆ. ವರ್ಷದಿಂದ ವರ್ಷಕ್ಕೆ ನಗರದ ತಾಪಮಾನ ಹೆಚ್ಚಾಗುತ್ತಿದೆ. ಇದು ನಗರದ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ನಗರದ ಪ್ರಾಕೃತಿಕ ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ತುರ್ತು ಅಗತ್ಯ, ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಗಿಡಮರಗಳ ಹೆಚ್ಚೆಚ್ಚು ಬೆಳೆಸುವ, ಕೆರೆಕಟ್ಟೆಗಳನ್ನು ಉಳಿಸುವ ಯೋಜನೆಗಳು ಅನುಷ್ಠಾನವಾಗಬೇಕಾಗಿದೆ.
ಈ ನಿಟ್ಟಿನಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ, ಪಾಳು ಬಿದ್ದ ಸ್ಥಿತಿಯಲ್ಲಿರುವ ಉದ್ಯಾನವನಗಳಲ್ಲಿ ಯಥೇಚ್ಛವಾಗಿ ಗಿಡಮರಗಳನ್ನು ಬೆಳೆಸುವ ಮೂಲಕ, ಕಿರು ಅರಣ್ಯಗಳಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ.
ಏನೀದು ಮಿಯಾವಾಕಿ ಪ್ರಯೋಗ?
*** ಜಪಾನ್ ದೇಶದ ಸಸ್ಯ ತಜ್ಞ ಮಿಯಾವಾಕಿ ಅವರು ಕಡಿಮೆ ಜಾಗದಲ್ಲಿ ಅರಣ್ಯ ಬೆಳೆಸಿ ಯಶಸ್ಸು ಕಂಡಿದ್ದರು. ಇದನ್ನು ಮಿಯಾವಾಕಿ ಪ್ರಯೋಗವೆಂದೇ ವಿಶ್ವದಾದ್ಯಂತ ಯಶಸ್ವಿಯಾಗಿದೆ. ಕಡಿಮೆ ಜಾಗದಲ್ಲಿ ಕಿರು ಅರಣ್ಯ ಬೆಳೆಸುವ ಈ ಪ್ರಯೋಗ ಸದ್ಯ ನಗರ-ಪಟ್ಟಣಗಳಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ.
ಸರ್ಕಾರವು ವಿಶೇಷ ಅನುದಾನ ನೀಡಲಿ
*** ಮಿಯಾವಾಕಿ ಪಾರ್ಕ್ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳೇ ಭರಿಸಬೇಕಾಗಿದೆ. ಇದು ಆಡಳಿತಗಳಿಗೆ ಹೊರೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಯೋಜನೆಯ ಅರ್ಧದಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು. ಈ ಸಂಬಂಧ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂಬ ಆಗ್ರಹಗಳು ಸ್ಥಳಿಯಾಡಳಿತಗಳಿಂದ ಕೇಳಿಬರಲಾರಂಭಿಸಿದೆ.
Miyawaki Parks in 100 Locations: Shivamogga, Bhadravati, Sagara, Soraba Selected
Shivamogga, March 12: In the current year’s state budget, the government announced a plan to grow mini-forests in selected urban and town areas using the Miyawaki method. The Directorate of Municipal Administration has begun implementing this announcement.
Steps have been taken to develop Miyawaki Parks in 100 urban local bodies. Among them, Shivamogga City Corporation, Bhadravati City Municipality, Sagara City Municipality, and Soraba Town Panchayat have been chosen.
The estimated cost of implementation is between ₹8–12 lakh. Tenders must be invited at the local body level. The expenses are to be covered through local body funds, grants from the 15th and 16th Finance Commissions, and CSR contributions, as directed by the Directorate of Municipal Administration.
Government lands within the jurisdiction of these local bodies, buffer zones around lakes, roadside buffer zones, and parks with a minimum area of 100 square meters are to be developed into Miyawaki Parks.
Preparations Already Underway
Shivamogga City Corporation had already considered growing a mini-forest under the Miyawaki method in one of its parks. A blueprint for the project was prepared months ago by Commissioner Mayannagowda.
Why This Project is Needed
Shivamogga, known as the “Malnad City,” is rapidly developing, but its natural resources are being depleted. Trees, lakes, and agricultural lands are disappearing within city limits.
This imbalance in the city’s natural ecosystem has led to rising temperatures year after year, seriously affecting urban life. There is an urgent need to restore ecological balance by planting more trees and conserving lakes.
Developing mini-forests in unused parks and open spaces across neighborhoods is seen as a vital step. The commissioner’s initiative to adopt the Miyawaki method is considered highly commendable.
What is the Miyawaki Method?
Japanese botanist Akira Miyawaki pioneered the technique of growing dense forests in small areas, achieving great success. This experiment, known as the Miyawaki method, has been adopted worldwide. It is now widely popular in urban and town areas for creating mini-forests in limited spaces.
Demand for Special Grants
Currently, the cost of Miyawaki Park development must be borne by the respective local bodies. This could become a burden for administrations. Local bodies are demanding that the state government cover at least half the expenses by releasing special grants.

