ಸೊರಬ (soraba), ಮೇ 23: ಮೆಸ್ಕಾಂ ಸೊರಬ ಉಪ ವಿಭಾಗದ ಉಳವಿ ಶಾಖೆಯ ಸಹಾಯಕ ಎಂಜಿನಿಯರ್ ಓರ್ವರನ್ನು ಅಮಾನತ್ತುಗೊಳಿಸಿ, ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಎಂಜಿನಿಯರ್ ಜಯದೇವಪ್ಪ ಅವರು ಮೇ 22 ರಂದು ಆದೇಶ ಹೊರಡಿಸಿದ್ದಾರೆ.
ಇಬ್ರಾಹಿಂ ಎನ್ ಅಮಾನತ್ತುಗೊಂಡ ಸಹಾಯಕ ಎಂಜಿನಿಯರ್ ಎಂದು ಗುರುತಿಸಲಾಗಿದೆ. ಮೇಲಾಧಿಕಾರಿಗಳ ಸೂಚನೆ ನಿರ್ಲಕ್ಷ್ಯಸಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಗೆ ಗೈರು ಹಾಜರಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಹಾಗೂ ಕಂಪನಿಯ ಕಂದಾಯ ವಸೂಲಾತಿಯಲ್ಲಿ ನಿರ್ಲಕ್ಷ್ಯ ಮಾಡಿರುವುದು ಸೇರಿದಂತೆ ವಿವಿಧ ಆರೋಪಗಳನ್ನು ಅವರ ಮೇಲೆ ಮಾಡಲಾಗಿದೆ.
ಸಚಿವರ ಸೂಚನೆ : ಸೊರಬದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸದರಿ ಎಂಜಿನಿಯರ್ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಸೂಚಿಸಿದ್ದರು. ಅದರಂತೆ ಇದೀಗ ಎಂಜಿನಿಯರ್ ಅಮಾನತ್ತುಗೊಳಿಸಲಾಗಿದೆ.
Soraba : MESCOM Assistant Engineer Suspended!
Soraba, May 23: An Assistant Engineer of the Ulavi branch of MESCOM Soraba sub-division has been suspended, an order was issued by MESCOM Shivamogga Circle Superintendent Engineer Jayadevappa on May 22.
Ibrahim N has been identified as the suspended Assistant Engineer. He has neglected the instructions of his superiors and has neglected his duties by not attending the Progress Review Meeting (KDP). Various charges have been made against him, including negligence in the collection of the company’s revenue.
Minister’s Notice: In the KDP meeting held in Soraba, District In-charge Minister Madhu Bangarappa had instructed to take action against the said engineer. Accordingly, the engineer has now been suspended.

