
ಪತ್ನಿಯ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ!
ಶಿವಮೊಗ್ಗ, ಜು. 20: ಪತ್ನಿಯ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ, ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆ ನಿವಾಸಿ ಅಲ್ಲಾಭಕ್ಷಿ (38) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಜು. 20 ರಂದು ನ್ಯಾಯಾಧೀಶರಾದ ಕೆ. ಮಾನು ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಮತ ಕೆ.ಎಸ್. ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: 5-1-2021 ರ ಮಧ್ಯಾಹ್ನದ ವೇಳೆ ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಅಲ್ಲಾಭಕ್ಷಿಯು ಡಿಶ್ ಕೇಬಲ್ ವೈರ್ ನಿಂದ ಪತ್ನಿಯ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ಸ್’ಪೆಕ್ಟರ್ ರವಿ ಎನ್.ಎಸ್. ಅವರು ಪ್ರಕರಣದ ತನಿಖೆ ನಡೆಸಿದ್ದರು. ಅಲ್ಲಾಭಕ್ಷಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
More Stories
shimoga | ಶಿವಮೊಗ್ಗ : ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!
Shimoga: accident zone – PWD has finally taken action to widen the state highway!
ಶಿವಮೊಗ್ಗ : ಅಪಘಾತ ವಲಯ – ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!
shivamogga – bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!
Shivamogga – Bhadravati Urban Development Authority is preparing ‘Maha Yojana – 2041’!
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!
shimoga | power cut news | ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!
Shivamogga: There will be no electricity in these areas on October 15th!
ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!
shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!
shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!
Shivamogga: Lokayukta police raid officer’s house!
shimoga news | ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು?
Shivamogga: Tunga River water for lakes – what is the demand of Basavanagangur villagers?
ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು?
shimoga | power cut | ಶಿವಮೊಗ್ಗ : ಅಕ್ಟೋಬರ್ 14 ರಂದು 50 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ!
Shivamogga: Power outage in more than 50 areas on October 14!
ಶಿವಮೊಗ್ಗ : ಅಕ್ಟೋಬರ್ 14 ರಂದು 50 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ!