Selling ganja in Bhadravati: One arrested! ಭದ್ರಾವತಿಯಲ್ಲಿ ಗಾಂಜಾ ಮಾರಾಟ : ಓರ್ವನ ಬಂಧನ!

ಭದ್ರಾವತಿಯಲ್ಲಿ ಗಾಂಜಾ ಮಾರಾಟ : ಓರ್ವನ ಬಂಧನ!

ಭದ್ರಾವತಿ (bhadravati), ಜು. 16: ಒಣ ಗಾಂಜಾ (ganja) ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಭದ್ರಾವತಿ ನಗರದ (bhadravati city) ಅಮೀರ್ ಜಾನ್ ಕಾಲೋನಿಯಲ್ಲಿ ಜು. 15 ರಂದು ನಡೆದಿದೆ.

ಅನ್ವರ್ ಕಾಲೋನಿ ನಿವಾಸಿ ಕೆ ಎಂ ಅಬೀದ್ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು (police) ಕಾರ್ಯಾಚರಣೆ ನಡೆಸಿ, ಗಾಂಜಾ ಸಮೇತ ಆರೋಪಿಯನ್ನು (accused) ಬಂಧಿಸಿದ್ದಾರೆ.

ಆರೋಪಿಯಿಂದ 5 ಸಾವಿರ ರೂ. ಮೌಲ್ಯದ 322 ಗ್ರಾಂ ತೂಕದ ಒಣ ಗಾಂಜಾ (ganja) ಹಾಗೂ ಗಾಂಜಾ ಮಾರಾಟ ಮಾಡಿ ಸಂಪಾದಿಸಿದ್ದ 1 ಸಾವಿರ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ಸ್’ಪೆಕ್ಟರ್ ಶ್ರೀಶೈಲ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಶರಣಪ್ಪ ಮತ್ತವರ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ (old town police station) ಎನ್.ಡಿ.ಪಿ.ಎಸ್ ಕಾಯ್ದೆಯಡಿ (ndps act) ಪ್ರಕರಣ ದಾಖಲಾಗಿದೆ.  

Shimoga – Bhadravati gambling stalls raided by police : 14 people arrested! ಶಿವಮೊಗ್ಗ – ಭದ್ರಾವತಿ ಇಸ್ಪೀಟ್ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ : 14 ಜನ ವಶಕ್ಕೆ! Previous post ಶಿವಮೊಗ್ಗ – ಭದ್ರಾವತಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ : 14 ಜನ ವಶಕ್ಕೆ!
shimoga – davanagere district farmers' lifeline bhadra dam water inflow huge increase! shimoga – davanagere district farmers' lifeline bhadra dam water inflow huge increase! ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಡ್ಯಾಂ ಒಳಹರಿವಿನಲ್ಲಿ ಭಾರೀ ಹೆಚ್ಚಳ! Next post ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಡ್ಯಾಂ ಒಳಹರಿವಿನಲ್ಲಿ ಭಾರೀ ಹೆಚ್ಚಳ!