ತುಂಡರಿಸಿದ ಗೇಟ್ : ತುಂಗಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ!

Broken gate : Heavy water out of Tungabhadra Reservoir! ತುಂಡರಿಸಿದ ಗೇಟ್ : ತುಂಗಾಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ!

ಹೊಸಪೇಟೆ (hospet), ಆ. 11: ತುಂಗಭದ್ರಾ ಜಲಾಶಯದ (tungabhadra dam) 19 ನೇ ಗೇಟ್​ ಚೈನ್ ಲಿಂಕ್ ಶನಿವಾರ ತಡರಾತ್ರಿ ತುಂಡರಿಸಿ​ದ ಹಿನ್ನೆಲೆಯಲ್ಲಿ, ಭಾನುವಾರ 33 ಕ್ರಸ್ಟ್ ಗೇಟ್ ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಸದ್ಯ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದೆ. ಹೊಸ ಗೇಟ್ ಸಿದ್ದಪಡಿಸಲಾಗುತ್ತಿದೆ. ದುರಸ್ತಿ ಕಾರ್ಯಕ್ಕೆ ಡ್ಯಾಂನಲ್ಲಿನ ಸುಮಾರು 60 ಟಿಎಂಸಿಯಷ್ಟು (tmc) ನೀರು ಕಡಿಮೆ ಮಾಡಬೇಕು. ಅಂದರೆ 20 ಅಡಿಯಷ್ಟು ನೀರು ಕಡಿಮೆಯಾಗಬೇಕಾಗಿದೆ.

ಪ್ರತಿದಿನ 2 ಲಕ್ಷ ಕ್ಯೂಸೆಕ್ (cusec) ನೀರನ್ನು ನಾಲ್ಕು ದಿನಗಳ ಕಾಲ ಹೊರಹರಿಸಿದರೆ, ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ ಎಂದು ಹೇಳಲಾಗಿದೆ.

ತುಂಗಭದ್ರಾ ಜಲಾಶಯದ (tungabhadra reservoir) 69 ವರ್ಷಗಳ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಈ ರೀತಿಯ ಅವಘಡವೊಂದು ನಡೆದಿದೆ. ಪ್ರಸ್ತುತ ವರ್ಷ ಮಲೆನಾಡು (malnad) ಭಾಗದಲ್ಲಿ ಬಿದ್ದ ಭಾರೀ ಮಳೆಗೆ (heavy rainfall), ತುಂಗಭದ್ರಾ ಜಲಾಶಯವು ನಿಗದಿತ ಅವಧಿಗಿಂತ ಮುನ್ನವೇ ಭರ್ತಿಯಾಗಿತ್ತು.

ಚೈನ್ ಲಿಂಕ್ (crest gate chain link) ತುಂಡರಿಸಿರುವ ಗೇಟ್‌ ನಂಬರ್ 19 ರ ಮೇಲೆ ಒತ್ತಡ ಹೆಚ್ಚಾಗಿದ್ದು, ಈ ಒಂದು ಗೇಟ್‌ನಿಂದಲೇ 35 ಸಾವಿರ ಕ್ಯುಸೆಕ್ ಗೂ ಅಧಿಕ ನೀರು ನದಿಗೆ ಹೋಗುತ್ತಿದೆ. ಗೇಟ್ (crest gate) ಮುರಿದಿರುವ ಪರಿಣಾಮ ಭಾನುವಾರ ಡ್ಯಾಂಗೆ ಜನರ ಭೇಟಿಯನ್ನು ನಿಷೇಧಿಸಲಾಗಿದೆ. ಹೈದರಾಬಾದ್, ಚೆನ್ನೈ, ಮುಂಬೈನಿಂದ ತಜ್ಞರ ತಂಡ ಡ್ಯಾಂಗೆ ಆಗಮಿಸಿದೆ. ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಜಲಾಶಯದ ಒಳಹರಿವು ಕುಸಿದ ಕಾರಣದಿಂದ ಶುಕ್ರವಾರವಷ್ಟೆ ಡ್ಯಾಂ ನೀರಿನ ಮಟ್ಟ ಕಾಯ್ದುಕೊಂಡು, 9 ಗೇಟ್ ಗಳ ಮೂಲಕ 28 ಸಾವಿರ ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿತ್ತು. 105. 78 ಅಡಿ ಟಿಎಂಸಿ ನೀರು ಸಂಗ್ರಹವಾಗಿದೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →