ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ : ಪ್ರವಾಹ ಭೀತಿ!
ಹೊಸಪೇಟೆ (hospet), ಆ.12: ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ (tungabhadra reservoir) ಸೋಮವಾರ ಬೆಳಿಗ್ಗೆಯಿಂದ ಭಾರೀ ಪ್ರಮಾಣದ ನೀರನ್ನು ಹೊರಹರಿಸಲಾಗುತ್ತಿದೆ (our flow). ಇದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ (Flood threat) ಎದುರಾಗಿದೆ. ನಿವಾಸಿಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಶನಿವಾರ ರಾತ್ರಿ ಜಲಾಶಯದ 19 ನೇ ಕ್ರಸ್ಟ್ ಗೇಟ್ (crest gate) ಸರಪಳಿ ತುಂಡರಿಸಿದ ಪರಿಣಾಮದಿಂದ ಕೊಚ್ಚಿ ಹೋಗಿದೆ. ದುರಸ್ತಿ ಕಾರ್ಯ ನಡೆಸಬೇಕಾದರೆ ಅಣೆಕಟ್ಟಿನಲ್ಲಿ (dam) ಸಂಗ್ರಹವಾಗಿರುವ ಅರ್ಧದಷ್ಟು (ಸುಮಾರು 52 ಟಿಎಂಸಿ – tmc) ನೀರು ಖಾಲಿ ಮಾಡಬೇಕಾಗಿದೆ.
ಈ ಕಾರಣದಿಂದ ಭಾನುವಾರ ರಾತ್ರಿಯಿಂದಲೇ ಜಲಾಶಯದಿಂದ (reservoir) 33 ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಸೋಮವಾರ ಬೆಳಿಗ್ಗೆಯಿಂದ ಈ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ. 1.50 ಲಕ್ಷ ಕ್ಯೂಸೆಕ್ (cusec) ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದರಿಂದ ನದಿ ಪಾತ್ರದ (river basin) ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಈಗಾಗಲೇ ವಿವಿಧ ರಾಜ್ಯಗಳಿಂದ ಆಗಮಿಸಿರುವ ತಜ್ಞರ ತಂಡ ಜಲಾಶಯದಲ್ಲಿ ಬೀಡು ಬಿಟ್ಟಿದೆ. ದುರಸ್ತಿ ಕಾರ್ಯದ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲಾರಂಭಿಸಿದೆ. ಹೊಸ ಕ್ರಸ್ಟ್ ಗೇಟ್ ಸಿದ್ದಪಡಿಸುವ ಕಾರ್ಯ ಕೂಡ ಬಿರುಸುಗೊಂಡಿದೆ.
ಆದರೆ ಕ್ರಸ್ಟ್ ಗೇಟ್ ದುರಸ್ತಿಗೆ ಡ್ಯಾಂನಲ್ಲಿನ ಅರ್ಧದಷ್ಟು ನೀರು ಖಾಲಿ ಮಾಡಬೇಕಾದ ಸ್ಥಿತಿಯಿದೆ. ಕಳೆದ ಎರಡು ವರ್ಷದಿಂದ ಡ್ಯಾಂ (tungabhadra dam) ಭರ್ತಿಯಾಗಿರಲಿಲ್ಲ. ಪ್ರಸ್ತುತ ವರ್ಷ ಮಲೆನಾಡು (malnad) ಭಾಗದಲ್ಲಿ ಬಿದ್ದ ಭಾರೀ ಮಳೆಯಿಂದ (heavyrainfall) ತುಂಗಾಭದ್ರಾ (tungabhadra) ಜಲಾಶಯ ನಿಗದಿತ ಅವಧಿಗೂ ಮೊದಲೇ ಗರಿಷ್ಠ ಮಟ್ಟ ತಲುಪಿತ್ತು.
ಇದು ಕರ್ನಾಟಕ (karnataka), ತೆಲಂಗಾಣ (telangana_), ಆಂಧ್ರಪ್ರದೇಶದ (andhra pradesh) ಅಚ್ಚುಕಟ್ಟು ಭಾಗದ ರೈತರಲ್ಲಿ ಸಾಕಷ್ಟು ಸಂತಸ ಸೃಷ್ಟಿಸಿತ್ತು. ಆದರೆ ಇದೀಗ ದಿಢೀರ್ ಆಗಿ ಡ್ಯಾಂನ ಕ್ರಸ್ಟ್ ಗೇಟ್ ವೊಂದು ಕೊಚ್ಚಿ ಹೋಗಿ, ನೀರು ಹರಿದು ಹೋಗುತ್ತಿರುವುದು ರೈತ ಸಮುದಾಯದಲ್ಲಿ ತೀವ್ರ ಬೇಸರ ಉಂಟು ಮಾಡಿದೆ.
