
shimoga | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮತ್ತೆ ಶುರುವಾಗಿದೆ ಪಿಕ್ ಪ್ಯಾಕೆಟ್ ಕಳ್ಳರ ಹಾವಳಿ!
ಶಿವಮೊಗ್ಗ (shivamogga), ಆ. 18: ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ (shimoga ksrtc bus stand) ಮಹಿಳಾ ಪ್ರಯಾಣಿಕರ ಚಿನ್ನಾಭರಣ ಅಪಹರಿಸುತ್ತಿದ್ದ ಐನಾತಿ ಕಳ್ಳಿಯರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಕಳೆದ ಕೆಲ ವಾರಗಳ ಹಿಂದಷ್ಟೆ ಬಂಧಿಸಿ ಜೈಲಿಗಟ್ಟಿದ್ದರು.
ತದನಂತರ ಬಸ್ ನಿಲ್ದಾಣ ಆವರಣದಲ್ಲಿ ಕಳವು ಕೃತ್ಯಗಳು (theft cases) ಕಡಿಮೆಯಾಗಿದ್ದವು. ಇದೀಗ ಮತ್ತೆ ಮಹಿಳಾ ಪ್ರಯಾಣಿಕರೋರ್ವರ ವ್ಯಾನಿಟಿ ಬ್ಯಾಗ್ (vanity bag) ನಲ್ಲಿದ್ದ ಚಿನ್ನಾಭರಣ ಕಳುವಾದ ಘಟನೆ ನಡೆದಿದೆ. ಇದರಿಂದ ಮತ್ತೆ ಬಸ್ ನಿಲ್ದಾಣ ಆವರಣದಲ್ಲಿ ಕಳ್ಳರ ತಂಡಗಳಸು ಸಕ್ರಿಯವಾಗಿರುವ ಅನುಮಾನಗಳು ವ್ಯಕ್ತವಾಗುವಂತಾಗಿದೆ.
ಕಳವು : ಶಿವಮೊಗ್ಗದ ಮದಾರಿಪಾಳ್ಯದ ನಿವಾಸಿ ಮೊಹಮ್ಮದ್ ಮುಹೀಬುಲ್ಲಾ ಎಂಬುವರು ಪತ್ನಿ, ಮಗನೊಂದಿಗೆ ಕಳೆದ ಆ. 14 ರಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ದಾವಣಗೆರೆ (davanagere) ಬಸ್ ಹತ್ತಿದ್ದಾರೆ.
ಈ ವೇಳೆ ಅವರ ಪತ್ನಿಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು(jewellery) ಕಳ್ಳರು ಅಪಹರಿಸಿದ್ದಾರೆ. 37,500 ರೂ. ಮೌಲ್ಯದ ಬಂಗಾರದ ಉಂಗುರ, 16,300 ರೂ. ಮೌಲ್ಯದ ಕಿವಿಯೊಲೆ ಕಳ್ಳತನ (theft) ಮಾಡಲಾಗಿದೆ.
ಬಸ್ ಹತ್ತುವ ವೇಳೆ ಸಾಕಷ್ಟು ಜನಸಂದಣಿಯಿತ್ತು. ಈ ವೇಳೆಯೇ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಅಪಹರಿಸಲಾಗಿದೆ ಎಂದು ಆ. 16 ರಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ (doddapete police station) ಪ್ರಕರಣ ದಾಖಲಾಗಿದೆ.