
ಭದ್ರಾ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ
ಭದ್ರಾವತಿ (bhadravati), ಆ. 18: ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ ಭದ್ರಾ ಜಲಾಶಯ (bhadra dam) ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ, ಭಾನುವಾರ ಗಣಿ ಮತ್ತು ಭೂ ವಿಜ್ಞಾನ ಸಚಿವ ಇಲಾಖೆ ಎಸ್.ಎಸ್.ಮಲ್ಲಿಕಾರ್ಜುನ್ (s s mallikarjun) ಅವರು ಬಾಗಿನ ಅರ್ಪಿಸಿದರು.
ದಾವಣಗೆರೆ ಜಿಲ್ಲೆಯ ಬೆಂಬಲಿಗರೊಂದಿಗೆ ಭದ್ರಾ ಜಲಾಶಯಕ್ಕೆ (bhadra reservoir) ಆಗಮಿಸಿದ ಸಚಿವರು, ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ, ಲೋಕಸಭಾ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್ (prabha mallikarjun), ಮಾಯಕೊಂಡ ಶಾಸಕ ಬಸವಂತಪ್ಪ,
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು, ಹೊನ್ನಾಳಿ ಶಾಸಕ ಶಾಂತನಗೌಡ ಹಾಗೂ ಹರಿಹರದ ಮಾಜಿ ಶಾಸಕ ರಾಮಪ್ಪ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕು ಗಳಿಂದ ಆಗಮಿಸಿದ್ದ ಮುಖಂಡರು ಉಪಸ್ಥಿತರಿದ್ದರು.
ಭರ್ತಿ : ಕಳೆದ ವರ್ಷ ಮಳೆ ಕೊರತೆಯಿಂದ ಭದ್ರಾ ಜಲಾಶಯ (bhadra dam) ಗರಿಷ್ಠ ಮಟ್ಟ ತಲುಪಿರಲಿಲ್ಲ. ಡ್ಯಾಂನಲ್ಲಿ ತೀವ್ರ ಸ್ವರೂಪದ ನೀರಿನ ಕೊರತೆ ಕಂಡುಬಂದಿತ್ತು. ಪ್ರಸ್ತುತ ವರ್ಷ ಉತ್ತಮ ಮಳೆಯಿಂದ (heavy rainfall) ಡ್ಯಾಂ ಗರಿಷ್ಠ ಮಟ್ಟಕ್ಕೆ ಬಂದಿದೆ. ಈಗಾಗಲೇ ಡ್ಯಾಂನಿಂದ ನೀರು ಹೊರ ಹರಿಸಲಾಗುತ್ತಿದೆ.
ಡ್ಯಾಂಗೆ ಬಾಗಿನ ಅರ್ಪಣೆಗೆ ದಾವಣಗೆರೆ (davanagere) ಭಾಗದ ಜನಪ್ರತಿನಿಧಿಗಳಿಂದ ಪೈಪೋಟಿ ಕಂಡುಬರುತ್ತಿದೆ. ಈಗಾಗಲೇ ಹಲವು ಜನಪ್ರತಿನಿಧಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ಭದ್ರಾ ಡ್ಯಾಂಗೆ (bhadra reservoir) ಬಾಗಿನ ಅರ್ಪಿಸಿದ್ದಾರೆ.
ಸಚಿವ ಮಲ್ಲಿಕಾರ್ಜುನ್ ಹೇಳಿದ್ದೇನು?
ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಯಂತೆ ಸಕಾಲಿಕವಾಗಿ ಬಂದ ಮುಂಗಾರು ಮಳೆಯಿಂದ ಭದ್ರಾ ಜಲಾಶಯ ಭರ್ತಿಯಾಗಿದ್ದು ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಶಿವಮೊಗ್ಗ ಸೇರಿದಂತೆ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಮತ್ತಿತರ ಜಿಲ್ಲೆಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (s s mallikarjun) ಅವರು ಹೇಳಿದರು.
ಅವರು ಇಂದು ಬಿ ಆರ್ ಪಿ ಯಲ್ಲಿ(brp) ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಸಕಾಲದಲ್ಲಿ ಮಳೆ ಆಗದಿದ್ದ ಪರಿಣಾಮವಾಗಿ ರೈತರಲ್ಲಿ ಆತಂಕದ ಛಾಯೆ ಮೂಡಿತ್ತು.
ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ, ಅದರಲ್ಲೂ ವಿಶೇಷವಾಗಿ ತೋಟಗಾರಿಕೆಯ ವಾರ್ಷಿಕ ಎರಡು ಬೆಳೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಹಾಯವಾಗಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕು ರೈತರ ನೆಮ್ಮದಿಯ ಬದಿಕಿಗೆ ಆಸಾರೆಯಾಗಲೆಂದು ಎಂದವರು ಆಶಿಸಿದರು.
ಈ ಜಲಾಶಯದ ವ್ಯಾಪ್ತಿಗಳು ಕೊಡುವ ಅಚ್ಚು ಪಟ್ಟು ಪ್ರದೇಶದ ರೈತರು ಇರುವ ನೀರನ್ನು ಮಿತ ಬಳಕೆ ಹಾಗೂ ಸದ್ಬಳಕೆ ಮಾಡಿಕೊಂಡು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು.