shimoga | selling ganja in ayanur : two youths arrested! ಶಿವಮೊಗ್ಗ- ಆಯನೂರಿನಲ್ಲಿ ಗಾಂಜಾ ಮಾರಾಟ : ಇಬ್ಬರು ಯುವಕರ ಬಂಧನ!

shimoga | ಶಿವಮೊಗ್ಗ- ಆಯನೂರಿನಲ್ಲಿ ಗಾಂಜಾ ಮಾರಾಟ : ಇಬ್ಬರು ಯುವಕರ ಬಂಧನ!

ಶಿವಮೊಗ್ಗ (shivamogga), ಆ. 29: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ತಾಲೂಕು ಆಯನೂರು (shimoga ayanuru village) ಗ್ರಾಮದ ಹಾಸ್ಟೆಲ್ ರಸ್ತೆಯಲ್ಲಿ ನಡೆದಿದೆ.

ಹಾರನಹಳ್ಳಿ (haranahalli) ಯ ಶಾಂತಿನಗರ ನಿವಾಸಿ ವಿಷ್ಣು ಪಿ (26) ಹಾಗೂ ನಾರಾಯಣಪುರ ಗ್ರಾಮದ ನಿವಾಸಿ ಸುನೀಲ್ ನಾಯ್ಕ್ (30) ಬಂಧಿತ ಆರೋಪಿಗಳೆಂದು (arrested accused) ಗುರುತಿಸಲಾಗಿದೆ.

ಆ. 28 ರಂದು ಬೈಕ್ ನಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಗಾಂಜಾ ಮಾರಾಟ (ganja sale) ಮಾಡುತ್ತಿದ್ದರು. ಈ ಕುರಿತಂತೆ ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳಿಂದ 12 ಸಾವಿರ ರೂ. ಮೌಲ್ಯದ 310 ಗ್ರಾಂ ತೂಕದ ಒಣ ಗಾಂಜಾ (dry ganja) ಹಾಗೂ ಕೃತ್ಯಕ್ಕೆ ಬಳಸಿದ್ದ 1. 50 ಲಕ್ಷ ರೂ. ಮೌಲ್ಯದ ಬೈಕ್ (bike) ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ (asp) ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ ಜಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ (dysp) ಸುರೇಶ್ ಎಂ ಮೇಲ್ವಿಚಾರಣೆಯಲ್ಲಿ

ಇನ್ಸ್’ಪೆಕ್ಟರ್ (inspector) ಹರೀಶ್ ಕೆ ಪಾಟೀಲ್, ಸಬ್ ಇನ್ಸ್’ಪೆಕ್ಟರ್ (sub inspector) ಶಾಂತರಾಜ್ ಹೆಚ್ ಜಿ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆ (kumsi police station) ಯಲ್ಲಿ ಪ್ರಕರಣ ದಾಖಲಾಗಿದೆ.

CM, DCM to Shivamogga : Citizens of the district demand implementation of their demandsಶಿವಮೊಗ್ಗಕ್ಕೆ ಸಿಎಂ, ಡಿಸಿಎಂ : ಬೇಡಿಕೆಗಳ ಕಾರ್ಯಗತಕ್ಕೆ ಜಿಲ್ಲೆಯ ನಾಗರೀಕರ ಆಗ್ರಹ Previous post bengaluru | ಸಿಎಂ ವಿರುದ್ದ ಪ್ರಾಸಿಕ್ಯೂಷನ್, ಡಿಸಿಎಂ ವಿರುದ್ದ ಸಿಬಿಐ ತನಿಖೆ ಪ್ರಕರಣ : ಹೈಕೋರ್ಟ್ ನತ್ತ ಎಲ್ಲರ ಚಿತ್ತ!
bengaluru | Bengaluru: Murder of a young woman from Bhadravati - husband arrested! ಬೆಂಗಳೂರು : ಭದ್ರಾವತಿ ಮೂಲದ ಯುವತಿ ಕೊಲೆ – ಪತಿಯ ಬಂಧನ! Next post bengaluru | ಬೆಂಗಳೂರು : ಭದ್ರಾವತಿ ಮೂಲದ ಯುವತಿ ಕೊಲೆ – ಪತಿಯ ಬಂಧನ!